ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ 29.1.1972

Last Updated 28 ಜನವರಿ 2022, 19:30 IST
ಅಕ್ಷರ ಗಾತ್ರ

ಪುಟಾಣಿಗಳ ನಾಟಕಶಾಲೆ ‘ವಿಜಯರಂಗ’ ಉದ್ಘಾಟನೆ

ಬೆಂಗಳೂರು, ಜ. 28– ರಾಜ್ಯ ಶಿಶುಕಲ್ಯಾಣ ಸಮಿತಿಯ ಮುಂದಿರುವ ಹಲವು ಆಶಾ ದಾಯಕ ಯೋಜನೆಗಳು ಕಾರ್ಯಗತ
ವಾದಾಗ, ನಗರದ ಕಬ್ಬನ್ ಪಾರ್ಕಿನ ಒಂದು ಭಾಗ ಪುಟಾಣಿಗಳ ನಂದನವನವಾಗಲಿದೆ.

ಸ್ವಚ್ಛಂದ ಪ್ರವೃತ್ತಿಯ ಪುಟ್ಟ ಮಕ್ಕಳು ತಮಗೆ ಬೇಕೆನ್ನುವ ಆಟಗಳನ್ನು ಆಡಿಕೊಂಡು ಅತ್ತಿಂದಿತ್ತ ಓಡಾಡುತ್ತ, ತಿನಿಸುಗಳ
ಸವಿಯನ್ನುಂಡು, ‘ಪುಟಾಣಿ ಎಕ್ಸ್‌ಪ್ರೆಸ್’ ರೈಲಿನಲ್ಲಿ ಪ್ರಯಾಣಿಸಿ ಪುಟಾಣಿಗಳ ರಂಗಮಂದಿರದಲ್ಲಿ ಚಲನಚಿತ್ರವನ್ನೋ ನಾಟಕವನ್ನೋ ನೋಡಿ ಆನಂದಿಸಿ ಸಂತೃಪ್ತರಾಗಿ ಮನೆಗೆ ಹಿಂದಿರುಗಬಹುದು.

ವಿಜಯರಂಗ: ಹಂತ, ಹಂತವಾಗಿ ಕಾರ್ಯ ಗತವಾಗಲಿರುವ ಈ ಯೋಜನೆಯಲ್ಲಿ ‘ಪುಟಾಣಿ ಎಕ್ಸ್‌ಪ್ರೆಸ್’ ಈಗಾಗಲೇ
ಓಡಾಡುತ್ತಲಿದ್ದು, ಪುಟಾಣಿ ರಂಗಮಂದಿರವನ್ನು ರಾಜ್ಯಪಾಲ ಶ್ರೀ ಧರ್ಮವೀರ ಇಂದು ಉದ್ಘಾಟಿಸಿದರು.

‘ಇದು ಮಕ್ಕಳಿಗೆ ಸಮಾಜ ಮಾಡಬಹುದಾದ ಬಹುದೊಡ್ಡ ಸೇವೆ’ ಎಂದು ಅವರುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT