ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ (ಭಾನುವಾರ–1972)

Last Updated 13 ಮೇ 2022, 19:49 IST
ಅಕ್ಷರ ಗಾತ್ರ

ಶಾಸಕರು ಶಿಸ್ತಿನಿಂದ ವರ್ತಿಸದಿದ್ದರೆ ಜನತಂತ್ರ ವ್ಯವಸ್ಥೆ ಕುಸಿದೀತು: ಧಿಲೋನ್‌

ಬೆಂಗಳೂರು, ಮೇ 13– ಸಂಸತ್ತು ಮತ್ತು ವಿಧಾನ ಮಂಡಲಗಳು ಸುಸೂತ್ರವಾಗಿ ತಮ್ಮ ಹೊಣೆ ನಿರ್ವಹಿಸಲು ಶಾಸಕರು ಸ್ವಯಂ
ನಿಯಂತ್ರಣ ಮತ್ತು ಶಿಸ್ತಿನಿಂದ ವರ್ತಿಸಬೇಕೆಂದು ಲೋಕಸಭಾ ಅಧ್ಯಕ್ಷ ಡಾ. ಜಿ.ಎಸ್‌. ಧಿಲೋನ್‌ ಅವರು ಇಂದು ಇಲ್ಲಿ ನುಡಿದು, ‘ಇಲ್ಲದಿದ್ದಲ್ಲಿ ನಮ್ಮ ಜನತಂತ್ರ ವ್ಯವಸ್ಥೆಯ ಮೂಲವೇ ಕುಸಿದೀತು’ ಎಂದು ಎಚ್ಚರಿಸಿದರು.

ಕಾಮನ್‌ವೆಲ್ತ್‌ ಪಾರ್ಲಿಮೆಂಟರಿ ಸಂಘದ ರಾಜ್ಯ ಶಾಖೆ ಮತ್ತು ರಾಜ್ಯಾಂಗ ಹಾಗೂ ಸಂಸದೀಯ ಸಂಸ್ಥೆಯ ರಾಜ್ಯ ಶಾಖೆಯ ಆಶ್ರಯದಲ್ಲಿ ವಿಧಾನಸೌಧದಲ್ಲಿ ಶಾಸಕರ ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಡಾ. ಧಿಲೋನ್‌ ಅವರು, ಸಭೆಯ ಗೌರವ, ಘನತೆ ಎತ್ತಿ ಹಿಡಿಯುವುದು ಪ್ರತಿಯೊಬ್ಬ ಶಾಸಕನ ಕರ್ತವ್ಯವೆಂದು ಹೇಳಿ, ಚುನಾಯಿತ ಪ್ರತಿನಿಧಿ ಬೇರೆಯವರಿಗೆ ಮಾರ್ಗದರ್ಶಕನಾಗಿರಬೇಕೆಂಬ ಅಂಶವನ್ನು ಮರೆಯಬಾರದೆಂದರು.

ಮುಖ್ಯವಾಗಿ, ಹೊಸದಾಗಿ ಶಾಸಕರಾಗಿ ಬಂದಿರುವವರು ಕಲಾಪದ ಕ್ರಮ, ನಿಯಮ ಮೊದಲಾದವುಗಳನ್ನು ಆಳವಾಗಿ ಅಭ್ಯಾಸ ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಅವರು, ಅಧ್ಯಕ್ಷ ಪೀಠಕ್ಕೆ ಗೌರವ ಸೂಚಿಸುವುದು ಶಾಸಕರ ಕರ್ತವ್ಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT