ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ನಿಚ್ಚಳ ಬಹುಮತ

Published 1 ಮಾರ್ಚ್ 2024, 23:30 IST
Last Updated 1 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಲಖನೌ, ಮಾರ್ಚ್‌ 1– ಉತ್ತರಪ್ರದೇಶ ವಿಧಾನಸಭೆಯ 425 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಇಂದು ನಿಚ್ಚಳ ಬಹುಮತ ಗಳಿಸಿತು.

ಬಸ್ತಿ ಚುನಾವಣಾ ಕ್ಷೇತ್ರದಿಂದ ಕಾಂಗ್ರೆಸ್‌ ಜಯದ ಕೊನೆಯ ಫಲಿತಾಂಶ ಬಂದಿತಲ್ಲದೆ, ಇದರಿಂದ ಕಾಂಗ್ರೆಸ್‌ 213 ಸ್ಥಾನ ಗಳಿಸಿದಂತಾಯಿತು. 1962ರಿಂದೀಚೆಗೆ ಇಲ್ಲಿ ಕಾಂಗ್ರೆಸ್‌ ಪಕ್ಷವು ಸ್ಪಷ್ಟ ಬಹುಮತ ಗಳಿಸಿರುವುದು ಇದೇ ಮೊದಲು.

ಗುಜರಾತ್‌: ಚಿಮಣಭಾಯಿ ಉಚ್ಚಾಟನೆ

ನವದೆಹಲಿ, ಮಾರ್ಚ್‌ 1– ಪಕ್ಷ ವಿರೋಧಿ
ಚಟುವಟಿಕೆಗಳಿಗಾಗಿ ಗುಜರಾತ್‌ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ಚಿಮಣಭಾಯಿ ಪಟೇಲ್ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಆರು ವರ್ಷ ಕಾಲ ಉಚ್ಚಾಟನೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT