ನವದೆಹಲಿ, ಅ. 1– ಸರ್ಕಾರವು ಕಳ್ಳಸಾಗಾಣಿಕೆದಾರರ ಬಗೆಗೆ ವರ್ತಿಸುತ್ತಿರುವಷ್ಟೇ ಉಗ್ರವಾಗಿ ಅಕ್ರಮ ದಾಸ್ತಾನುದಾರರ ಬಗೆಗೂ ವ್ಯವಹರಿಸುವುದು ಎಂದು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.
ಗಾಂಧಿ ಜಯಂತಿಯ ಹಿಂದಿನ ದಿನವಾದ ಇಂದು ಆಕಾಶವಾಣಿಗೆ ಸಂದರ್ಶನ ನೀಡಿದ ಅವರು, ದೇಶದಲ್ಲಿ ತಲೆದೋರಿರುವ ತೀವ್ರ ಕಷ್ಟ ಸ್ಥಿತಿ ಬಗ್ಗೆ ಜನತೆಯ ಗಮನ ಸೆಳೆದರು.
ದೇಶದ ಹಲವು ಭಾಗಗಳಲ್ಲಿ ತಲೆದೋರಿರುವ ಅಭಾವ ಪರಿಸ್ಥಿತಿಯನ್ನು ‘ಅತ್ಯಂತ ದುಸ್ತರ’ ಎಂದು ವರ್ಣಿಸಿದ ಅವರು, ‘ದೇಶದಲ್ಲಿ ಆಹಾರ ಇದೆ. ಆದರೆ, ಬಚ್ಚಿಟ್ಟಿರುವುದನ್ನು ಹೊರಗೆಳೆಯಬೇಕಷ್ಟೆ. ತೆಗೆಯುವ ಕಾರ್ಯಾಚರಣೆ ನಡೆದಿದೆ. ಅದನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.