ಕರಾವಳಿ ಪ್ರದೇಶದಲ್ಲಿ ನಕ್ಸಲೀಯ ಚಟುವಟಿಕೆ

ನವದೆಹಲಿ, ಮೇ 10– ಭತ್ತದ ಕಣಜಗಳಾದ ಕರಾವಳಿ ಪ್ರದೇಶಗಳಲ್ಲಿ ಭೂವಿಹೀನರು ಮತ್ತು ಯುವ ಜನಾಂಗದಲ್ಲಿ ನಕ್ಸಲೀಯ ಚಳವಳಿ ಹೆಚ್ಚು ವ್ಯಾಪಕವಾಗುತ್ತಿದೆ.

ಆಂಧ್ರ, ಕೇರಳ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಭೂಸಮಸ್ಯೆಗಳು ನಕ್ಸಲೀಯ ಚಳವಳಿಗೆ ಸಂಬಂಧಿಸಿದಂತಿವೆ. ಮೈಸೂರು ರಾಜ್ಯದಲ್ಲಿ ನಕ್ಸಲೀಯರ
ಸಮಸ್ಯೆ ಇಲ್ಲ. ಆದರೂ ಕೇರಳದಿಂದ ನಕ್ಸಲೀಯರ ಅತಿಕ್ರಮಣವನ್ನು ತಡೆಯಲು ಕೇರಳ ಗಡಿಯಲ್ಲಿ ಬಲವಾದ ಸಶಸ್ತ್ರ ಪೊಲೀಸ್ ಕಾವಲು ಹಾಕಲಾಗಿದೆ. ಬೆಂಗಳೂರಿನಲ್ಲಿ ಮಾವೊ ಭಿತ್ತಿಪತ್ರಗಳನ್ನು ಅಂಟಿಸಿದ ಪ್ರಕರಣ ಬಿಟ್ಟರೆ ಬೇರಾವ ಮಹತ್ವದ ಘಟನೆಯೂ ಇಲ್ಲ.

ಹಿಂದಿ ಮಾಧ್ಯಮ ವಾರ್ಸಿಟಿಯಿಂದ ಕನ್ನಡದ ಪ್ರಗತಿಗೆ ವಿಪತ್ತು: ವಿರೋ ಧಿಸಲು ಜನತೆಗೆ ಕರೆ

ಮೈಸೂರು, ಮೇ 10– ಬೆಂಗಳೂರಿನಲ್ಲಿ ಕೇಂದ್ರದ ಹಿಂದಿ ಮಾಧ್ಯಮದ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನಡೆದಿದೆಯೆಂದು ಹೇಳಲಾಗಿರುವ ಪ್ರಯತ್ನ ಹಿಂದಿಯೇತರರ ಮೇಲೆ ಹಿಂದಿ ಸಾಮ್ರಾಜ್ಯ ಶಾಹಿಯನ್ನು ಹೇರಲು ನಡೆದಿರುವ ಮೋಸದ ಯತ್ನವೆಂದು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಡೈರೆಕ್ಟರ್ ಡಾ. ಹಾ.ಮಾ.ನಾಯಕ್ ಅವರು ಇಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.