ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ, 21–1–1971

Last Updated 20 ಜನವರಿ 2021, 15:48 IST
ಅಕ್ಷರ ಗಾತ್ರ

ಚಿತ್ರಶಿಲ್ಪಿ ವೆಂಕಟಪ್ಪನವರ ಕಲಾಕೃತಿಗಳು ಸರ್ಕಾರದ ಪೋಷಣೆಗೆ

ಬೆಂಗಳೂರು, ಜ. 20– ದಿವಂಗತ ಚಿತ್ರಶಿಲ್ಪಿ ವೆಂಕಟಪ್ಪ ಅವರ ಭವ್ಯ ಕಲಾಜೀವನ ಸಾಧನೆಯ ಪ್ರತೀಕಗಳಾಗಿರುವ
ಅವರದೇ ಆದ ವಿಶಿಷ್ಟ ಪರಂಪರೆಯ ಹೆಗ್ಗುರುತುಗಳೆನಿಸಿರುವ ಕಲಾವಿಶೇಷಗಳು ನಾಳೆ ವಿಧ್ಯುಕ್ತವಾಗಿ ಸರ್ಕಾರದ ರಕ್ಷಣೆ, ಪೋಷಣೆಗೆ ಬರಲಿವೆ.

ಬೆಲೆ ಕಟ್ಟಲು ಸಾಧ್ಯವಿಲ್ಲದಿರುವಷ್ಟು ಅಮೂಲ್ಯ ವಸ್ತುಗಳಾದರೂ ತಜ್ಞರ ಅಂದಾಜಿನ ಪ್ರಕಾರ, ಸುಮಾರು 15 ಲಕ್ಷ ರೂಪಾಯಿ ಬೆಲೆಬಾಳುವ ಕಲಾ ವಸ್ತುಗಳನ್ನು ದಿವಂಗತ ವೆಂಕಟಪ್ಪನವರ ಸೋದರ ಸಂಬಂಧಿ ಶ್ರೀ ಕೆ.ರಾಮರಾಜು ಅವರು, ಕಬ್ಬನ್‌ಪಾರ್ಕ್‌ನಲ್ಲಿ ನಿರ್ಮಾಣವಾಗುತ್ತಿರುವ ‘ವೆಂಕಟಪ್ಪ ಕಲಾ ಮಂಟಪ’ದಲ್ಲಿ ಶಾಶ್ವತವಾಗಿಡಲೆಂದು ಸರ್ಕಾರಕ್ಕೆ ದಾನ ಮಾಡಿದ್ದಾರೆ.

ಮತಗಳ ಎಣಿಕೆಗೆ ನವ್ಯ ವ್ಯವಸ್ಥೆ

ಬೆಂಗಳೂರು, ಜ. 20– ಒಂದು ಮತಗಟ್ಟೆಯಲ್ಲಿ ಯಾವ ಯಾವ ಅಭ್ಯರ್ಥಿಗಳಿಗೆ ಎಷ್ಟೆಷ್ಟು ಮತಗಳು ಬಂದವೆಂಬುದನ್ನು ಇನ್ನು ಮುಂದೆ ತಿಳಿದುಕೊಳ್ಳಲು ಸಾಧ್ಯವಾಗದು.

ಮತದಾನದ ರಹಸ್ಯವನ್ನು ಕಾಪಾಡುವ ದೃಷ್ಟಿಯಿಂದ ಮತಗಳ ಎಣಿಕೆಯ ವಿಧಾನವನ್ನೇ ಚುನಾವಣೆ ಆಯೋಗ ಬದಲಾಯಿಸಿದೆ.

ಎಣಿಕೆ ನಡೆಯುವ ಸ್ಥಳದಲ್ಲಿಎಲ್ಲ ಮತಪೆಟ್ಟಿಗೆಗಳನ್ನು ಒಡೆದು ಮತಚೀಟಿಗಳನ್ನು ಒಂದು ಕಡೆ ಸುರಿದು ಮಿಶ್ರ ಮಾಡಲಾಗುವುದು. ಆನಂತರ ಮತಚೀಟಿಗಳನ್ನು ಎಣಿಕೆಗಾಗಿ ಎಣಿಕೆ ಮೇಜುಗಳಿಗೆ ಸರಬರಾಜು ಮಾಡಲಾಗುವುದು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT