ತೆಲಂಗಾಣ– ಆಂಧ್ರದ ಇತರ ನಾಯಕರೊಡನೆ ಚರ್ಚೆ ನಂತರ ನಿರ್ಧಾರ
ನವದೆಹಲಿ, ಮಾರ್ಚ್ 9– ಆಂಧ್ರಪ್ರದೇಶದ ವಿಭಜನೆ ಬೇಡಿಕೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ತೆಲಂಗಾಣ ಮತ್ತು ಆಂಧ್ರದ ಇತರ ನಾಯಕರ ಜತೆ, ತಾವು ಮಾತುಕತೆ ನಡೆಸುವುದಾಗಿ ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಪ್ರತ್ಯೇಕತಾವಾದಿ ಆಂಧ್ರ ನಾಯಕ ಶ್ರೀ ಬಿ.ವಿ.ಸುಬ್ಬಾರೆಡ್ಡಿ ಅವರಿಗೆ ತಿಳಿಸಿದರು.
ತಾವು ಆಶಾಭಾವನೆ ಹೊತ್ತು ಆಂಧ್ರಕ್ಕೆ ಹಿಂತಿರುಗಬಹುದೇ ಎಂದು ಪ್ರಶ್ನಿಸಿದಾಗ ಪ್ರಧಾನಿ ಈ ಉತ್ತರ ನೀಡಿದರೆಂದು ಸುಬ್ಬಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.
ಗಂಗಾ–ಕಾವೇರಿ ಸಂಪರ್ಕ ಯೋಜನೆ ವಿವರ–ರಾಜ್ಯಕ್ಕೆ ಅಧಿಕೃತ ತಿಳಿವಳಿಕೆ ಇಲ್ಲ
ಬೆಂಗಳೂರು, ಮಾರ್ಚ್ 9– ಗಂಗಾ ಕಾವೇರಿ ನದಿಗಳ ಸಂಪರ್ಕ ಯೋಜನೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಅಧಿಕೃತವಾಗಿ ವಿವರಗಳೇನೂ ಇದುವರೆಗೆ ಬಂದಿಲ್ಲ ಎಂದು ಭಾರಿ ನೀರಾವರಿ ರಾಜ್ಯ ಸಚಿವ ಶ್ರೀ ಎಚ್.ಎನ್.ನಂಜೇಗೌಡ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ಶ್ರೀ ಸಿ.ಬೈರೇಗೌಡ (ವೇಮಗಲ್) ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನೆ ಬಗ್ಗೆ ವಿವರಗಳನ್ನು ಕೇಳಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.