ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಹಾಸ್ಟೆಲ್ ಸಿಮೆಂಟು ತಮ್ಮ ಕಟ್ಟಡ ನಿರ್ಮಾಣಕ್ಕೆ ಬಳಸಿಲ್ಲ: HMC

Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಹಾಸ್ಟೆಲ್ ಸಿಮೆಂಟು, ಉಕ್ಕು ತಮ್ಮ ಕಟ್ಟಡ ನಿರ್ಮಾಣಕ್ಕೆ ಬಳಸಿಲ್ಲ: ಎಚ್‌.ಎಂ.ಸಿ.

ಬೆಂಗಳೂರು, ಏ. 11– ‘ಹರಿಜನ ಹಾಸ್ಟೆಲ್‌ ಗಳಿಗಾಗಿ ಇಟ್ಟಿದ್ದ ಸಿಮೆಂಟ್ ಮತ್ತು ಉಕ್ಕು, ಜಯನಗರದ ತಮ್ಮ ಕಟ್ಟಡದ ನಿರ್ಮಾಣಕ್ಕೆ ವರ್ಗಾವಣೆ ಆಗಿದೆ ಎಂಬ ಆಪಾದನೆ ಆಧಾರ ರಹಿತ’ ಎಂದು ಲೋಕೋಪಯೋಗಿ ಮಂತ್ರಿ ಎಚ್‌.ಎಂ. ಚನ್ನಬಸಪ್ಪ ಅವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.

‘ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳ ಹೇಳಿಕೆಯನ್ನು ನಾನು ಈಗಾಗಲೇ ಸಭೆಯ ಮುಂದೆ ಮಂಡಿಸಿದ್ದೇನೆ. ಅದರಲ್ಲಿ ರಶೀದಿ ನಂಬರುಗಳು, ಪೂರೈಕೆ ದಿನ, ಪೂರೈಕೆದಾರರ ವಿಳಾಸ, ಪ್ರಮಾಣ, ಮೌಲ್ಯ ಹಾಗೂ ಹಣ ಪಾವತಿಯ ವಿವರಗಳಿವೆ’ ಎಂದು ಸಚಿವರು ಹೇಳಿಕೆಯೊಂದರಲ್ಲಿ ತಿಳಿಸಿದರು.

ಲೋಕಸಭೆ ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿ ಕೂಗಿದ ಪಿಸ್ತೂಲುಧಾರಿ

ನವದೆಹಲಿ, ಏ. 11– ತುಂಬಿದ ಎರಡು ಪಿಸ್ತೂಲುಗಳನ್ನು ಹೊಂದಿದ್ದ ಯುವಕನೊಬ್ಬ ಪ್ರೇಕ್ಷಕರ ಗ್ಯಾಲರಿಗೆ ಇಂದು ಘೋಷಣೆಗಳನ್ನು ಕೂಗುತ್ತಾ ನುಗ್ಗಲು ಯತ್ನಿಸಿದ್ದು, ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ಸಶಸ್ತ್ರ ವ್ಯಕ್ತಿಯೊಬ್ಬ ಲೋಕಸಭೆ ಗ್ಯಾಲರಿಗೆ ಪ್ರವೇಶಿಸಲು ಪ್ರಯತ್ನಿಸಿರುವುದು
ಸ್ವಾತಂತ್ರ್ಯೋತ್ತರದಲ್ಲಿ ಇದೇ ಮೊದಲು. ಪ್ರೇಕ್ಷಕರ ಗ್ಯಾಲರಿಯಿಂದ ಹಸ್ತಪ್ರತಿಗಳನ್ನು
ಎಸೆದ, ಘೋಷಣೆಗಳನ್ನು ಕೂಗಿದ ಪ್ರಕರಣಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT