ಕನ್ನಡಾಂಬೆಯ ನೆಚ್ಚಿನ ಕುವರ ಅನಕೃ ನಿಧನ
ಬೆಂಗಳೂರು, ಜುಲೈ 8– ಕನ್ನಡ ಕಾದಂಬರಿಯ ಸಾರ್ವಭೌಮ ಅನಕೃ ಇಂದು ರಾತ್ರಿ ಸುಮಾರು 10.30ರ ಸಮಯದಲ್ಲಿ ಇಲ್ಲಿ ನಿಧನರಾದರು.
ಕನ್ನಡ ಕಾದಂಬರಿಯಿಂದ ಹಿಡಿದು ಕನ್ನಡ ಚಳವಳಿಯವರೆಗೆ ನಾಡು–ನುಡಿಗಾಗಿ ನಿರಂತರ ಹೋರಾಟ ನಡೆಸಿದ ಅ.ನ.ಕೃಷ್ಣರಾಯರನ್ನು ಉಳಿಸಲು ನಗರದ ನರ್ಸಿಂಗ್ ಹೋಮಿನ ವೈದ್ಯರು ವಿಶೇಷವಾಗಿ ಪ್ರಯತ್ನಿಸಿದರು.
ಹೇಮಾವತಿ ಅಣೆ ಕಾರ್ಯ ತಡೆಗೆ ಕೇಂದ್ರಕ್ಕೆ ಒತ್ತಾಯ
ಮದ್ರಾಸ್, ಜುಲೈ 8– ಕಾವೇರಿ ಜಲವಿವಾದವನ್ನು ತಕ್ಷಣ ಪಂಚಾಯಿತಿಗೆ ಒಪ್ಪಿಸುವಂತೆ ಹಾಗೂ ಹೇಮಾವತಿ ಮತ್ತಿತರ ಕಾವೇರಿ ಯೋಜನೆಗಳ ನಿರ್ಮಾಣ ಕಾರ್ಯದಲ್ಲಿ ಮುಂದುವರಿಯದಂತೆ ಮೈಸೂರು ಸರ್ಕಾರವನ್ನು ತಡೆಯುವಂತೆ ತಮಿಳುನಾಡು ವಿಧಾನಸಭೆ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.
ಕೇಂದ್ರ ಸರ್ಕಾರವನ್ನು ಈ ರೀತಿ ಒತ್ತಾಯಪಡಿಸುವ ನಿರ್ಣಯವೊಂದನ್ನು ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.