ಇಸ್ರೇಲ್ ವಾಪಸಾತಿ ಬಗ್ಗೆ ರಷ್ಯ ನಿಲುವಿನಲ್ಲಿ ಬದಲಾವಣೆ
ಮಾಸ್ಕೊ, ಅ.21–ಪಶ್ಚಿಮ ಏಷ್ಯ ಸಮರಕ್ಕೆ ಶಾಂತಿಸೂತ್ರವನ್ನು ಕಂಡು ಹಿಡಿಯಲು ಕ್ರೆಮ್ಲಿನ್ ಭವನದಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಂಸಿಜರ್ ಮತ್ತು ರಷ್ಯದ ನಾಯಕರ ನಡುವೆ ಇಂದು ಮಾತುಕತೆ ನಡೆಯುತ್ತಿದ್ದಂತೆ ಪರಿಹಾರದ ಮೂಲ ಅಂಶಗಳ ಬಗ್ಗೆ ರಷ್ಯದ ನಿಲುವು ಬದಲಾಗಿರುವ ಸೂಚನೆಗಳನ್ನು ಪ್ರಾವ್ಡಾ ನೀಡಿತು. ಕ್ರೆಮ್ಲಿನ್ ಭವನದಲ್ಲಿ ಮಾತುಕತೆ ಈ ದಿನ ಆರಂಭವಾಯಿತು. ರಷ್ಯದ ಕಡೆ ರಷ್ಯ ಕಮ್ಯುನಿಷ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಬ್ರೆಜ್ನೇವ್ ಮತ್ತು ವಿದೇಶಾಂಗ ಸಚಿವ ಆಂಡ್ರಿ ಗ್ರೋಮಿಕೊ ಮಾತುಕತೆಯಲ್ಲಿ
ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.