ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಮಂಗಳವಾರ, 28-11-1972

Last Updated 27 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಶುಕ್ರವಾರ ಎಲ್ಲ ಭಾರತೀಯ ಯುದ್ಧ ಬಂದಿಗಳ ಬಿಡುಗಡೆ

ನವದೆಹಲಿ, ನವೆಂಬರ್‌ 27– ಆರುನೂರು ಹದಿನೇಳು ಮಂದಿ ಭಾರತೀಯ ಯುದ್ಧ ಬಂದಿಗಳನ್ನು ಶುಕ್ರವಾರ ಬಿಡುಗಡೆ ಮಾಡಿ ಪಾಕಿಸ್ತಾನ ಗಡಿಯಾಚೆ ಭಾರತಕ್ಕೆ ಕಳುಹಿಸಲಾಗುವುದೆಂದು ಪಾಕಿಸ್ತಾನ ಇಂದು ಪ್ರಕಟಿಸಿತು.

ಭಾರತೀಯ ಯುದ್ಧ ಬಂದಿಗಳ ಬಿಡುಗಡೆ ನಿರ್ಧಾರವನ್ನು ಇಸ್ಲಾಮಾಬಾದಿನಲ್ಲಿರುವ ಸ್ವಿಸ್‌ ರಾಯಭಾರಿ ಮೂಲಕ ದೆಹಲಿಗೆ ತಿಳಿಸಲಾಗಿದೆಯೆಂದು ರೆಡಿಯೋ ಪಾಕಿಸ್ತಾನ್ ಪ್ರಸಾರ ಮಾಡಿದೆ.

‘ಹಾಸನ– ಮಂಗಳೂರು ನಡುವೆ ಬ್ರಾಡ್‌ಗೇಜ್‌ ಪರಿಶೀಲನೆಯಲ್ಲಿ’

ನವದೆಜಹಲಿ, ನವೆಂಬರ್‌ 27– ಹಾಸನದಿಂದ ಮಂಗಳೂರುವರೆಗೆ ಬ್ರಾಡ್‌ಗೇಜ್‌ ರೈಲು ಮಾರ್ಗ ನಿರ್ಮಾಣದ ಪ್ರಶ್ನೆ ಸರ್ಕಾರದ ತೀವ್ರ ಪರಿಶೀಲನೆಯಲ್ಲಿದೆ ಎಂದು ರೈಲ್ವೆಶಾಖೆ ಉಪಸಚಿವ ಮಹಮದ್‌ ಶಫಿ ಖುರೇಷಿ ಅವರು ಇಂದು ರಾಜ್ಯಸಭೆಯಲ್ಲಿ ಡಾ. ಕೆ. ನಾಗಪ್ಪ ಆಳ್ವಾ ಅವರಿಗೆ ತಿಳಿಸಿದರು.

ಅದನ್ನು ಬ್ರಾಡ್‌ಗೇಜಾಗಿ ಪರಿವರ್ತಿಸಲು ಕೂಡಲೇ ನಿರ್ಧಾರ ತೆಗೆದುಕೊಳ್ಳಬಾರ
ದೇಕೆ ಎಂಬ ಸದಸ್ಯರ ಪ್ರಶ್ನೆಗೆ ಸಚಿವರು, ಸದ್ಯದಲ್ಲಿ ನಿರ್ಮಿಸುತ್ತಿರುವ ಮೀಟರ್‌
ಗೇಜ್‌ ಮಾರ್ಗ 1974ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆಯೆಂದೂ, ಅದನ್ನು ಬ್ರಾಡ್‌ಗೇಜಾಗಿ ಪರಿವರ್ತಸಿಲು ನಿರ್ಧರಿಸುವುದಕ್ಕೆ ಮುನ್ನ ಅದರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರಪಡಿಸಿಕೊಂಡಿರಬೇಕೆಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT