ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಬುಧವಾರ, ಮೇ 28, 1997

Last Updated 27 ಮೇ 2022, 19:30 IST
ಅಕ್ಷರ ಗಾತ್ರ

ಮಹಿಳಾ ಮೀಸಲಾತಿ: ಶರದ್‌ ವಿರೋಧಕ್ಕೆ ಪಾಸ್ವಾನ್‌ ಟೀಕೆ
ವಲ್ಸಾದ್‌, ಮೇ 27 (ಪಿಟಿಐ)–
ಲೋಕಸಭೆ ಹಾಗೂ ರಾಜ್ಯಗಳ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಕುರಿತಂತೆ ಜನತಾದಳದ ಕಾರ್ಯಾಧ್ಯಕ್ಷ ಶರದ್‌ ಯಾದವ್‌ ಅವರ ನಿಲುವನ್ನು ಕೇಂದ್ರ ರೈಲ್ವೆ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಅವರು ಕಟುವಾಗಿ ಟೀಕಿಸಿದ್ದಾರೆ.

ನಿನ್ನೆ ವಾಪಿಯಲ್ಲಿ ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟಿಸಿದ ಸಚಿವರು ಸುದ್ದಿಗಾರರ ಜೊತೆ ಮಾತನಾಡುತ್ತ, ‘ಇತರ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಮಹಿಳೆಯರಿಗೂ ಮೀಸಲಾತಿ ನೀಡಬೇಕು ಎಂಬ ಯಾದವ್‌ ಅವರ ಬೇಡಿಕೆ ಈ ಮಸೂದೆ ಕುರಿತ ಬದ್ಧತೆ ಕಡಿಮೆಯಾಗುವುದನ್ನು ಸೂಚಿಸುವುದು’ ಎಂದು ಹೇಳಿದರು.

‘ಆದರೆ ಮಸೂದೆಯಲ್ಲಿ ತಿದ್ದುಪಡಿಯಾಗಬೇಕು ಎಂದು ಬೇಡಿಕೆ ಮಂಡಿಸಿದವರು ಮಸೂದೆ ಚರ್ಚೆಗೆ ಬಂದಾಗ ಸರ್ವಾನುಮತ
ದಿಂದ ಅಂಗೀಕರಿಸುವಂತೆ’ ಮನವಿ ಮಾಡಿದರು.

*

ಶ್ರೀಲಂಕಾಕ್ಕೆ ಸ್ವಾತಂತ್ರ್ಯೋತ್ಸವಕ್ರಿಕೆಟ್‌ ಕಪ್
ಕಲ್ಕತ್ತ, ಮೇ 27–
ಪಾಕಿಸ್ತಾನ ತಂಡವನ್ನು ಎರಡನೇ ಫೈನಲ್‌ನಲ್ಲಿ ನಿರೀಕ್ಷೆಗಿಂತ ಸುಲಭವಾಗಿ 85 ರನ್‌ಗಳಿಂದ ಸೋಲಿಸಿದ ವಿಶ್ವ ಚಾಂಪಿಯನ್‌ ಶ್ರೀಲಂಕಾ ತಂಡವರು ಇಂದು ಪೆಪ್ಸಿ ಸ್ವಾತಂತ್ರ್ಯೋತ್ಸವ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಶ್ರೀಲಂಕಾ ಮೊಹಾಲಿಯಲ್ಲಿಮೊದಲನೇ ಪಂದ್ಯ ಕೂಡ ಗೆದ್ದ ಕಾರಣ ಉತ್ತಮ ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯವನ್ನು ಆಡುವ ಪ್ರಮೇಯವಿಲ್ಲ.

ಸ್ಕೋರು ವಿವರ: ಶ್ರೀಲಂಕಾ: 49.4 ಓವರ್‌ಗಳಲ್ಲಿ 309; ಪಾಕಿಸ್ತಾನ: 43.1 ಓವರ್‌ಗಳಲ್ಲಿ 224.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT