50 ವರ್ಷಗಳ ಹಿಂದೆ: ಶುಕ್ರವಾರ 5–11–1971

ಒಪ್ಪಂದ ಉಲ್ಲಂಘನೆ ಪಾಕ್‌ಗೆ ಹೊಸದಲ್ಲ
ನವದೆಹಲಿ, ನ. 4– ಪಾಕಿಸ್ತಾನವು 1965ರ ಯುದ್ಧ ಕಾಲದಲ್ಲಿ ರಾಜತಾಂತ್ರಿಕ ರಕ್ಷಣೆ ಕುರಿತ ವಿಯೆನ್ನಾ ಒಪ್ಪಂದವನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘಿಸಿದ ವಿಸ್ಮಯಕರ ಘಟನೆಯನ್ನು ಪಾಕ್ ಹೈಕಮಿಷನ್‌ನಿಂದ ಪಕ್ಷಾಂತರಗೊಂಡು ಈಗ ಇಲ್ಲಿನ ಬಾಂಗ್ಲಾ ದೇಶದ ರಾಯಭಾರ ಕಚೇರಿಯ ಮುಖ್ಯಾಧಿಕಾರಿಯಾಗಿರುವ ಹುಮಾಯೂನ್ ರಷೀದ್ ಚೌಧುರಿ ಅವರು ಇಂದು ಹೊರಗೆಡಹಿದರು.
ಪಾಕ್ ಸರ್ಕಾರ 1965ರಲ್ಲಿ ಬೇಕೆಂದೇ ವಿಯನ್ನಾ ಒಪ್ಪಂದವನ್ನು ಮುರಿದಿರುವಾಗ, ತನ್ನ ಹೈಕಮಿಷನ್ ಮುಂದೆ ನಡೆಯುತ್ತಿರುವ ಪ್ರದರ್ಶನಗಳ ಬಗೆಗೆ ಈ ಒಪ್ಪಂದದ ಮಾತನಾಡಲು ಪಾಕಿಸ್ತಾನಿ ವಕ್ತಾರರಿಗೆ ಯಾವ ನಾಲಿಗೆ ಇದೆ ಎಂದು ಪ್ರಶ್ನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.