ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಗುರುವಾರ, 6–8–1970

Last Updated 5 ಆಗಸ್ಟ್ 2020, 15:08 IST
ಅಕ್ಷರ ಗಾತ್ರ

ಶಾಂತಿಪಾಲನೆಗೆ ಸರ್ವ ಪ್ರಯತ್ನ: ಅಧಿಕಾರಿಗಳಿಗೆ ಕರೆ

ಬೆಂಗಳೂರು, ಆ. 5– ಏನೇ ಆಗಲಿ ರಾಜ್ಯದಲ್ಲಿ ಶಾಂತಿಪಾಲನೆಯನ್ನು ಮಾಡಲು ಸರ್ವ ಪ್ರಯತ್ನ ನಡೆಸಬೇಕೆಂದು ಮುಖ್ಯಮಂತ್ರಿ ಶ್ರೀ ವಿರೇಂದ್ರ ಪಾಟೀಲರು ಅಧಿಕಾರಿಗಳಿಗೆ ಇಂದು ಕರೆ ನೀಡಿದರು.

ಡಿವಿಜನಲ್‌ ಕಮಿಷನರುಗಳು ಮತ್ತು ಜಿಲ್ಲಾಧಿಕಾರಿಗಳ ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿಯವರು ‘ಅದೃಷ್ಟವಶಾತ್‌ ಇಂದು ಮೈಸೂರು ರಾಜ್ಯದಲ್ಲಿ ಶಾಂತಿಪಾಲನೆ ಗಂಭೀರ ಸ್ವರೂಪದ್ದಾಗಿಲ್ಲ. ಆದರೆ ನಾವು ಇದರಿಂದ ಸಂತೃಪ್ತರಾಗುವಂತಿಲ್’ ಎಂದರು.

ಆಡಳಿತ ಭಾಷೆಯಾಗಿ ಕನ್ನಡದ ವಿಸ್ತರಣೆ ನ.1ರಿಂದ ಜಾರಿ

ಬೆಂಗಳೂರು, ಆ. 5– ಈಗಾಗಲೇ ತಾಲ್ಲೂಕು ಮಟ್ಟದವರೆಗಿರುವ ಕನ್ನಡ, ಮುಂದಿನ ರಾಜ್ಯೋತ್ಸವದ ದಿನ, ನವೆಂಬರ್‌ 1ರಿಂದ, ಸಬ್‌–ಡಿವಿಜನಲ್‌ ಮಟ್ಟದವರೆಗೆ ಆಡಳಿತ ಭಾಷೆಯಾಗಲಿದೆ.

ಆಡಳಿತದ ಇತರ ಮಟ್ಟಗಳಲ್ಲೂ ಈ ಆಜ್ಞೆಯನ್ನು ಜಾರಿಗೆ ತರುವ ಉದ್ದೇಶದಿಂದ ಸೂಕ್ತ ಸಲಹೆಗಳನ್ನು ಸೂಚಿಸಲು ರಾಜ್ಯದ ಮಂತ್ರಿಮಂಡಲವು ಸಮಿತಿಯೊಂದನ್ನು ರಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT