ಹಳ್ಳಿ ಜನರ ಮೇಲೆ ಪೊಲೀಸರ ಹಲ್ಲೆ

ಬೆಂಗಳೂರು, ಡಿ. 11– ಮಧುಗಿರಿ ತಾಲ್ಲೂಕಿನ ಹನುಮಂತಪುರ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳ ಮೇಲೆ ಈ ತಿಂಗಳು ಆದಿಭಾಗದಲ್ಲಿ ಪೊಲೀಸಿನವರು ವಿನಾಕಾರಣ ದಾಳಿ ಮಾಡಿ ಮುಗ್ಧ ರೈತರು ಮತ್ತು ಅವರ ಹೆಂಗಸರು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರಲ್ಲದೆ ಕೈಗೆ ಸಿಕ್ಕಿದವ ರಿಗೆ ಚಿತ್ರಹಿಂಸೆ ಕೊಟ್ಟರೆಂದು ಕೊರಟಗೆರೆ ತಾಲ್ಲೂಕಿನ ರೈತ ಸಂಘದ ಅಧ್ಯಕ್ಷ ಶ್ರೀ ಚನ್ನಪ್ಪನವರು ಆಪಾದಿಸಿದರು.

ಭೂಕಂಪ: ಕೊಯ್ನಾ ನಗರದಲ್ಲಿ 105ಕ್ಕೂ ಅಧಿಕ ಸಾವು

ಮುಂಬೈ, ಡಿ. 11– ಭಾರತದ ಇಡೀ ಪಶ್ಚಿಮಾರ್ಧವನ್ನೇ ಇಂದು ಮುಂಜಾನೆ ಅಲುಗಾಡಿಸಿದ ವಿಪತ್ಕಾರಕ ಭೂಕಂಪಕ್ಕೆ ಸತಾರಾ ಜಿಲ್ಲೆಯಲ್ಲಿರುವ ಮಹಾರಾಷ್ಟ್ರ ಜಲವಿದ್ಯುತ್ ಕೇಂದ್ರ ಸ್ಥಳವಾದ ಕೊಯ್ನಾ ನಗರ ತುತ್ತಾಗಿ ಸೋಮವಾರ ರಾತ್ರಿ ವೇಳೆಗೆ ಹಾಳು ಬಿದ್ದಿತ್ತು.

ರಾತ್ರಿ ಇಲ್ಲಿಗೆ ತಲುಪಿರುವ ವರದಿಗಳ ಪ್ರಕಾರ 105 ಜನ ಸತ್ತಿದ್ದಾರಲ್ಲದೆ, 1300 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 300 ಮಂದಿಗೆ ತೀವ್ರ ಗಾಯಗಳಾಗಿವೆ. ಸತ್ತವರಲ್ಲಿ ಅನೇಕರು ಸ್ತ್ರೀಯರು ಮತ್ತು ಮಕ್ಕಳೆಂದು ಗೊತ್ತಾಗಿದೆ. ಇವರಲ್ಲಿ ಅನೇಕರು ನಿದ್ರಿಸುತ್ತಿದ್ದಾಗ ಅವರ ಮನೆಗಳು ಕುಸಿದಿವೆ

ವರದಿ ನ್ಯಾಯ ಎಂದಿದ್ದರಂತೆ ಚವಾಣ್

ಬೆಂಗಳೂರು, ಡಿ. 10– ಮಹಾಜನ್ ಆಯೋಗದ ವರದಿ ನ್ಯಾಯವಾದ ವರದಿಯೆಂದು ಕೇಂದ್ರದ ಗೃಹ ಸಚಿವ ಶ್ರೀ ವೈ.ಬಿ. ಚವಾಣ್‌ರವರು ಒಪ್ಪಿಕೊಂಡಿದ್ದಾರೆಯೇ? ಒಂದು ‘ರಹಸ್ಯವನ್ನು ಬಯಲು ಮಾಡಿದ’ ಕಾಂಗ್ರೆಸ್ ಸದಸ್ಯ ಶ್ರೀ ಕೆ.ಕೆ. ಶೆಟ್ಟರಿಗೆ ತಿಳಿದುಬಂದಿರುವ ಸಮಾಚಾರದಂತೆ ಶ್ರೀ ಚವಾಣರು ‘ನ್ಯಾಯವಾಗಿದೆ’ ಅಂದಿದ್ದರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.