ಹೊಸ ಸಂಪುಟದಲ್ಲಿ ಜತ್ತಿ, ಕಂಠಿ, ಆರ್.ಎಂ. ಪಾಟೀಲ್, ಅರಸು, ನಾರಾಯಣಗೌಡರಿಲ್ಲ?

ನವದೆಹಲಿ, ಮೇ 27– ಶ್ರೀ ವೀರೇಂದ್ರ ಪಾಟೀಲ್ ನಾಯಕತ್ವದಲ್ಲಿ ರಚನೆಯಾಗಲಿರುವ ಹೊಸ ಸರ್ಕಾರದಲ್ಲಿ ಶ್ರೀ ನಿಜಲಿಂಗಪ್ಪನವರ ಸಂಪುಟದಲ್ಲಿದ್ದ 5 ಮಂದಿ ಸಚಿವರಿಗೆ ಸ್ಥಾನವಿಲ್ಲದಂತಾಗಬಹುದು.

ಹೊಸ ಸರ್ಕಾರದಲ್ಲಿ ಶ್ರೀಗಳಾದ ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ದೇವರಾಜ ಅರಸು, ಆರ್.ಎಂ. ಪಾಟೀಲ್ ಮತ್ತು ನಾರಾಯಣಗೌಡ ಅವರಿಗೆ ಸ್ಥಾನ ಸಿಗದಿರಬಹುದು.

ಶ್ರೀ ರಾಜಶೇಖರ ಮೂರ್ತಿ, ಎಂ.ಪಿ.ಸಿ.ಸಿ. ಕಾರ್ಯದರ್ಶಿ ಶ್ರೀ ಕೆ.ಜಿ. ಲಕ್ಕಪ್ಪ, ಶ್ರೀ ವಸಂತರಾವ್ ಪಾಟೀಲ್, ಪಿ.ಎಂ. ನಾಡಗೌಡ ಅವರಿಗೆ
ಹೊಸ ಸರ್ಕಾರದಲ್ಲಿ ಸ್ಥಾನ ಖಚಿತವಾದಂತೆ ತೋರುತ್ತದೆ.

ಕೇಂದ್ರ ಸಂಪುಟಕ್ಕೆ ಜತ್ತಿ?

ನವದೆಹಲಿ, ಮೇ 27– ಕೇಂದ್ರ ಸಚಿವ ಸಂಪುಟದಲ್ಲಿ ಶ್ರೀ ಬಿ.ಡಿ. ಜತ್ತಿ ಅವರಿಗೆ ಸ್ಥಾನ ದೊರೆಯುವ ಸಂಭವವಿದೆಯೆಂದು ತಿಳಿದು
ಬಂದಿದೆ.

ಕೇಂದ್ರ ಸಚಿವ ಸಂಪುಟದ ಪುನರ‍್ರಚನೆ ಬಹಳ ಹಿಂದೆಯೇ ಆಗಬೇಕಿತ್ತು. ಶ್ರೀ ಚೆನ್ನಾರೆಡ್ಡಿ ಅವರ ನಿರ್ಗಮನದಿಂದ ಇದು ತುರ್ತಾಗಿ ಆಗಬೇಕಿದೆ.

ಆದಷ್ಟು ಹೆಚ್ಚು ಜಿಲ್ಲಾ ಪ್ರಾತಿನಿಧ್ಯ

ಬೆಂಗಳೂರು, ಮೇ 27– ಮುಂದಿನ ಮಂತ್ರಿಮಂಡಲದಲ್ಲಿ ಎಲ್ಲ ಜಿಲ್ಲೆಗಳಿಗೂ ಸಾಧ್ಯವಾಗದಿದ್ದರೆ ಬಹುತೇಕ ಜಿಲ್ಲೆಗಳಿಗೆ ಪ್ರಾತಿನಿಧ್ಯವಿರುವುದೆಂದು ನೂತನ ನಾಯಕ ಶ್ರೀ ವೀರೇಂದ್ರ ಪಾಟೀಲ್ ಅವರ ಸಮೀಪ ವಲಯಗಳಿಂದ ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.