ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 13–3–1967

Last Updated 12 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಹಮದಾಲಿ, ಶಂಕರೇಗೌಡ, ನಾಡಗೌಡ ನೂತನ ಸಚಿವರು
ಬೆಂಗಳೂರು, ಮಾ. 12– 
ರಾಜ್ಯದ ನೂತನ ಮಂತ್ರಿಮಂಡಲದಲ್ಲಿ ಹಿಂದಿನ ಸಚಿವ ಸಂಪುಟದಲ್ಲಿ ಉಳಿದಿರುವ ಎಲ್ಲ 10 ಮಂದಿ ಸಚಿವರು ಹಾಗೂ 3 ಮಂದಿ ಹೊಸಬರು ಇರುವರೆಂದು ತಿಳಿದು ಬಂದಿದೆ.

ಎಂ.ಪಿ.ಸಿ.ಸಿ. ಅಧ್ಯಕ್ಷ  ಶ್ರೀ ಮಹಮದಾಲಿ, ಪ್ರಧಾನ ಕಾರ್ಯದರ್ಶಿ ಕೆ.ವಿ. ಶಂಕರೇಗೌಡ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಬಾಗಲ್ಕೋಟೆಯ ಶ್ರೀ ಪಿ.ಎಂ. ನಾಡಗೌಡ ಅವರುಗಳು ಹೊಸ ಮಂತ್ರಿಗಳಾಗಿ ನೇಮಕವಾಗುವರೆಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಈಗಾಗಲೇ ಪ್ರಮಾಣ ವಚನವನ್ನು ಸ್ವೀಕರಿಸಿದ್ದು, ಉಳಿದ 13 ಮಂದಿ ಸಚಿವರಾಗಿ, 8 ಮಂದಿ ಉಪ ಸಚಿವರಾಗಿ ಸೋಮವಾರ ಸಂಜೆ ರಾಜಭವನದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಉಪಸಚಿವರಲ್ಲಿ 5 ಮಂದಿ ಹೊಸಬರಿರುವರೆಂದು ಗೊತ್ತಾಗಿದೆ.

ವಾಮ ನಿಲುವಿನಲ್ಲಿ ನಂಬಿಕೆ: ಇಂದಿರಾ ಘೋಷಣೆ
ನವದೆಹಲಿ, ಮಾ. 12–
ತಾವು ಪ್ರಧಾನಮಂತ್ರಿಯಾಗಿರುವ ಹೊಸ ಕೇಂದ್ರ ಸರ್ಕಾರ ‘ವಾಮ ನಿಲುವಿನ ನೀತಿಯನ್ನು ಅನುಸರಿಸುವುದು’ ಎಂದು ಶ್ರೀಮತಿ ಇಂದಿರಾ ಗಾಂಧಿಯವರು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ನಾಯಕರಾಗಿ ಪುನರಾಯ್ಕೆಯಾದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ
ತಿಳಿಸಿದರು. ಅಂತಹ ನೀತಿಯೊಂದೇ ‘ನಮ್ಮ ಜನತೆಯನ್ನು ಪೀಡಿಸುತ್ತಿರುವ ಬಡತನವನ್ನು ನಿವಾರಿಸಲು ಸಾಧ್ಯ’ ಎಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT