‘ನಾನಾ ಸಾಹೇಬ್ ಚಿದಂಬರಗೌಡ ಬಹದ್ದೂರ ದೇಸಾಯಿ ಅವರದ್ದು ಚಿತ್ರಕಲಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಉತ್ತರ ಕರ್ನಾಟಕ ಭಾಗದ ಅಪರೂಪದ ಕಲಾವಿದರಲ್ಲಿ ಒಬ್ಬರಾಗಿದ್ದ ಅವರು, ಬಹುತೇಕ ಜನರ ಪಾಲಿಗೆ ಎನ್.ಸಿ.ದೇಸಾಯಿ ಎಂದೇ ಪ್ರಸಿದ್ಧರು. ದೀರ್ಘಕಾಲದವರೆಗೆ ಯೋಚಿಸಿ, ಇಂತಿಂಥ ಚೌಕಟ್ಟು ಹಾಕಿಕೊಂಡು ಕಲಾಕೃತಿಯನ್ನು ರಚಿಸಲು ಆರಂಭಿಸಿದರೆ ಸಾಕು, ಅದು ಪೂರ್ಣಗೊಳ್ಳುವವರೆಗೆ ತನ್ಮಯತೆ ಕಾಯ್ದುಕೊಳ್ಳುತ್ತಿದ್ದರು. ಅವರು ಅಕ್ಷರಶಃ ಕಲಾ ತಪಸ್ವಿಯಾಗಿದ್ದರು’.

ದೇಸಾಯಿ ಅವರ ಕಲಾಕೃತಿಗಳಲ್ಲಿನ ಸೂಕ್ಷ್ಮರೇಖೆಗಳು, ಬಣ್ಣಗಳ ವೈವಿಧ್ಯತೆ, ಕಲಾ ನೈಪುಣ್ಯತೆ ಮತ್ತು ಶ್ರದ್ಧೆಯನ್ನು ಹೀಗೆ ವಿವರಿಸಿದವರು ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ಬಸವರಾಜ ಕಲೆಗಾರ.

ದೇಸಾಯಿ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಹುಬ್ಬಳ್ಳಿಯ ಶ್ರೀವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದಲ್ಲಿಈಚೆಗೆ ಏರ್ಪಡಿಸಲಾಗಿದ್ದ ದೇಸಾಯಿ ಅವರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟದ ಸಂದರ್ಭದಲ್ಲಿ ಅವರ ಕಲಾಕೃತಿಗಳ ಮಹತ್ವವನ್ನು ಆತ್ಮೀಯವಾಗಿ ತಿಳಿಪಡಿಸಿದರು. ಶ್ರೇಷ್ಠ ಕಲಾವಿದ ಹೇಗೆ ಸರಳವಾಗಿ ಬದುಕಿದರು ಎಂಬದನ್ನೂ ಮಾತಿನಲ್ಲಿ ಕಟ್ಟಿಕೊಟ್ಟರು.

‘ದೇಸಾಯಿ ಅವರು ಗಂಟೆಗಳ ಲೆಕ್ಕದಲ್ಲಿ ಕೆಲಸ ಮಾಡುತ್ತಿರಲಿಲ್ಲ. ದಿನಗಟ್ಟಲೇ ಕಲೆಯನ್ನು ಧ್ಯಾನಿಸುತ್ತಿದ್ದರು. ಒಂದೇ ಕಡೆ ಗಂಟೆಗಟ್ಟಲೇ ಕೂತು ಕಲೆಗಾಗಿ ಸಮರ್ಪಿಸಿಕೊಳ್ಳುತ್ತಿದ್ದರು. ಅವರ ಕಲಾಕೃತಿಗಳು ಆಯಾ ಕಾಲಘಟ್ಟದ ಸಾಕ್ಷಿಪ್ರಜ್ಞೆ. ಅವು ದೇಶದ ಸಂಸ್ಕೃತಿಯ ಭಾಗವೂ ಹೌದು. ಅವುಗಳನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ’ ಎಂಬ ಕಾಳಜಿಯೂ ಅವರು ವ್ಯಕ್ತಪಡಿಸಿದರು.

ಎನ್.ಸಿ.ದೇಸಾಯಿ ಅವರು ಕಲಾವಿದರಷ್ಟೇ ಆಗಿರಲಿಲ್ಲ. ಅವರು ಬಹುಭಾಷಾ ತಜ್ಞರಾಗಿದ್ದರು. ಬರಹಗಾರ, ವರ್ಣಚಿತ್ರಕಾರ, ಕಲಾ ವಿಮರ್ಶಕ, ಛಾಯಾಗ್ರಾಹಕರೂ ಆಗಿದ್ದರು. 50–60ರ ದಶಕದಲ್ಲೇ ಜಾಹೀರಾತು ಮತ್ತು ಸಂವಹನ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದರು. ಇದೆಲ್ಲಕ್ಕಿಂತ ಮುಖ್ಯವಾಗಿ, ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ದೇಶವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಲು ಶ್ರಮಿಸಿದ್ದರು.

ಎನ್.ಸಿ.ದೇಸಾಯಿ ಅವರು ಶಾಲಾ ಶಿಕ್ಷಣ ಪೂರ್ಣಗೊಳಿಸಲಿಲ್ಲ. ಆಗ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟವು ಅವರ ಮೇಲೆ ಪ್ರಭಾವ ಬೀರಿತು. ಬ್ರಿಟಿಷರ ವಿರುದ್ಧ 1942ರಲ್ಲಿ ‘ಭಾರತ ಬಿಟ್ಟು ತೊಲಗಿ’ ಎಂದು ಗಾಂಧೀಜಿ ಕರೆ ಕೊಟ್ಟಿದ್ದನ್ನು ಗಂಭೀರವಾಗಿ ಪರಿಗಣಿಸಿದ ಶಾಲಾ ಶಿಕ್ಷಣ ತ್ಯಜಿಸಿ, ಚಳವಳಿಗೆ ಧುಮ್ಮಿಕ್ಕಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಬದ್ಧತೆ ಒಂದೆಡೆಯಿದ್ದರೆ, ಇನ್ನೊಂದೆಡೆ ಕಲಾಕ್ಷೇತ್ರದೆಡೆ ಹೆಚ್ಚಿನ ತುಡಿತವೂ ಇತ್ತು. ದೇಶ ಸ್ವಾತಂತ್ರ್ಯಗೊಂಡ ಮರುವರ್ಷವೇ ದೇಸಾಯಿ ಅವರು ಮುಂಬೈಗೆ ಪ್ರಯಾಣ ಬೆಳೆಸಿ, ಅಲ್ಲಿನ ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ವಿನ್ಯಾಸ ಕಲಾವಿದರಾಗಿ ಸೇರಿದರು. ಮೂರು ದಶಕಗಳು ಕಲಾವಿದರಾಗಿ ಕಾರ್ಯನಿರ್ವಹಿಸಿದ ಬಳಿಕ, ಪ್ರಚಾರ, ಜಾಹೀರಾತು ಮತ್ತು ಜನಸಂಪರ್ಕ ಕ್ಷೇತ್ರದಲ್ಲೂ ಹೆಚ್ಚಿನ ಆಸಕ್ತಿಯಿಂದ ತೊಡಗಿಸಿಕೊಂಡರು.

ಕಲೆಯನ್ನು ಮೇಲ್ಮಟ್ಟದಲ್ಲಿ ಅಧ್ಯಯನ ಮಾಡಿದರೆ ಅಥವಾ ಅರ್ಪಿಸಿಕೊಂಡರೆ ಸಾಲದು. ಅದನ್ನು ಶಿಸ್ತುಬದ್ಧತೆ ಮತ್ತು ಶಾಸ್ತ್ರೋಕ್ತವಾಗಿ ಕಲಿಯಬೇಕು ಎಂಬ ಉದ್ದೇಶದಿಂದ ಕಲಾ ಗುರು ಜಿ.ಎಸ್.ದಂಡಾವತಿಮಠ ಅವರ ಬಳಿ ಮಾರ್ಗದರ್ಶನ ಪಡೆದರು. ಅಲ್ಲಿನ ಪ್ರತಿಷ್ಠಿತ ಜೆ.ಜೆ. ಕಲಾ ಶಾಲೆಯಿಂದ ಲಲಿತ ಕಲೆ ಮತ್ತು ವರ್ಣಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದರು.

ಬದುಕಿನ ಬಹುತೇಕ ವರ್ಷಗಳನ್ನು ಮುಂಬೈನಲ್ಲೇ ಕಳೆದ ಅವರು ಕಲೆಗಷ್ಟೇ ಸೀಮಿತಗೊಳ್ಳಲು ಇಷ್ಟಪಡಲಿಲ್ಲ. ಪತ್ರಿಕೋದ್ಯಮ ಕ್ಷೇತ್ರದತ್ತ ಒಲವು ತೋರಿದರು. ಮುಂಬೈನಲ್ಲಿನ ಕಲೆ ಮತ್ತು ಸಂಸ್ಕೃತಿ ಕುರಿತಾದ ಚಟುವಟಿಕೆಗಳು ಅದರಲ್ಲೂ ಮುಖ್ಯವಾಗಿ ಕನ್ನಡ ಸಂಘಸಂಸ್ಥೆಗಳು ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮ, ಕಲಾ ಪ್ರದರ್ಶನ ಮುಂತಾದವುಗಳ ಬಗ್ಗೆ ಚಿತ್ರಗಳ ಸಹಿತ ವರದಿಗಳನ್ನು ಕನ್ನಡದ ಪತ್ರಿಕೆಗಳಿಗೆ ನೀಡುತ್ತಿದ್ದರು. ಕಲಾ ವಿಮರ್ಶೆ ಸೇರಿ ವಿವಿಧ ವಿಷಯಗಳ ಕುರಿತು ಲೇಖನಗಳನ್ನು ಬರೆಯುತ್ತಿದ್ದರು. ಅವರ ಹಲವಾರು ಛಾಯಾಚಿತ್ರಗಳು, ಕಲಾಕೃತಿಗಳು, ಬರಹಗಳು ಪ್ರಮುಖ ಕನ್ನಡ ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಂಡವು.

ದೇಸಾಯಿ ಅವರು ತಮ್ಮ ಜೀವನದ ಕೊನೆಯ ಇಪ್ಪತ್ತು ವರ್ಷಗಳನ್ನು ಹುಬ್ಬಳ್ಳಿಯಲ್ಲಿ ಕಳೆದರು. ಕಲಾ ಸ್ಟುಡಿಯೊ ಸ್ಥಾಪಿಸಿದ ಅವರು, ಸಂವಹನ ಹಾಗೂ ಜಾಹೀರಾತು ಕಲೆಗೆ ಒತ್ತು ನೀಡಿದರು. ‘ದೃಶ್ಯ ಕಲಾ ಮಾಧ್ಯಮಕ್ಕೆ ಸೃಜನಾತ್ಮಕ ಸ್ಪರ್ಶ ನೀಡಬಹುದು’ ಎಂಬುದನ್ನು ಅವರು ತೋರಿಸಿಕೊಟ್ಟರು. ಹೊಸ ತಲೆಮಾರಿನ ಯುವಜನರಿಗೆ ಸ್ಫೂರ್ತಿಯಾದರು.

ಕಲೆಯಲ್ಲಿ ಆಧ್ಯಾತ್ಮದ ಒಲವು

ಎನ್.ಸಿ.ದೇಸಾಯಿ ಅವರ ಕಲಾಕೃತಿಗಳು ವಿವಿಧ ವಿಷಯ ಕುರಿತು ಬೆಳಕು ಚೆಲ್ಲಿದವು. ಎಲ್ಲಕ್ಕಿಂತ ಮಿಗಿಲಾಗಿ ಆಧ್ಯಾತ್ಮಿಕ ಚಿಂತನೆಯನ್ನೂ ಮೂಡಿಸಿದವು. 1956ರಿಂದ ಅವರು ದೇಶದ ವಿವಿಧೆಡೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ನೀಡಿದರು. ಪ್ರತಿಷ್ಠಿತ ಕಲಾ ಗ್ಯಾಲರಿಗಳಿಗೆ ಸೀಮಿತಗೊಳ್ಳದೇ ಹುಬ್ಬಳ್ಳಿ ಗದಗನಂತಹ ಊರುಗಳಲ್ಲಿಯೂ ಕಲಾಸಕ್ತರಿಗೆ ಕಲಾಕೃತಿಗಳನ್ನು ಪರಿಚಯಿಸಿದರು.

ದೇಸಾಯಿ ಅವರ ‘ವಿಶ್ವವ್ಯಾಪಿ ಗಣಪತಿ’ ಅಥವಾ ‘ವಿದೇಶಗಳಲ್ಲಿ ವಿನಾಯಕ’ ಅಪರೂಪದ ಕಲಾ ಸರಣಿ ಆಗಿವೆ. ಜಗತ್ತಿನ ವಿವಿಧ ಸಂಸ್ಕೃತಿಗಳನ್ನು ಅಧ್ಯಯನ ಮಾಡಿ ಗಣೇಶನನ್ನು ಚಿತ್ರಸಿದರು. ಥಾಯ್ಲೆಂಡ್ ಜಪಾನ್ ಮುಂತಾದ ದೇಶಗಳ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಗಣೇಶನಿಗೆ ವಿವಿಧ ರೂಪ ನೀಡಿದರು. 19ನೇ ಶತಮಾನದ ಸೊಲ್ಲಾಪುರದ ಸಂತ ಕಲಾವಿದ ಶುಭರಾಯನ ಕುರಿತು ಸಂಶೋಧನೆ ನಡೆಸಿದರು. ತಮ್ಮ ಬರಹ ಹಾಗೂ ಪ್ರಚಾರ ಕಾರ್ಯಗಳಿಂದ ಈ ಕಲಾವಿದನನ್ನು ಪುನರುಜ್ಜೀವನಗೊಳಿಸಿದರು. ಮಹಾರಾಷ್ಟ್ರದ ವರ್ಲಿ ಬುಡಕಟ್ಟುಗಳ ಜನಪದ ಕಲೆ ಕುರಿತು ಅಧ್ಯಯನ ಮಾಡಿದರು. 1999ರಲ್ಲಿ ಅವರು ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಮತ್ತು ಕೇಂದ್ರ ಸರ್ಕಾರದ ಫೆಲೋಶಿಪ್ಗೆ ಪಾತ್ರರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.