ಶನಿವಾರ, ಅಕ್ಟೋಬರ್ 19, 2019
28 °C

ಬುಧವಾರ, 5–10–1994

Published:
Updated:

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 29 ಸಾವು

ಝಾನ್ಸಿ, ಅ. 4 (ಪಿಟಿಐ)– ಇಲ್ಲಿನ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದಾಗ ಅದರಲ್ಲಿ ಕೆಲಸ ಮಾಡುತ್ತಿದ್ದ ಹಲವು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಕನಿಷ್ಠ 29 ಕಾರ್ಮಿಕರು ಸತ್ತರು.

ದಸರಾ: ಇನ್ನೂ ಅನಿಶ್ಚಿತ

ಮೈಸೂರು, ಅ. 4– ಇನ್ನೊಂದು ದಿನ ಕಾದರೆ ವಿಶ್ವವಿಖ್ಯಾತ ಮೈಸೂರು ದಸರಾದ ತೆರೆ ಏಳಬೇಕಾಗಿದೆ. ಈ ತೆರೆ ಏಳುತ್ತದೆಯೇ ಇಲ್ಲವೇ ಎಂಬುದು ಈಗಲೂ ಅನಿಶ್ಚಿತವಾಗಿಯೇ ಉಳಿದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಒಂದು ಕಡೆ ಪ್ಲೇಗ್ ಭೀತಿಯಿಂದ ಕಂಗಾಲಾಗಿರುವ ಮೈಸೂರು ನಗರದ ನಾಗರಿಕರು, ಇನ್ನೊಂದು ಕಡೆ ದಸರಾ ಕುರಿತಂತೆ ದಿನಕ್ಕೊಂದು ರೀತಿಯಲ್ಲಿ ಪ್ರಕಟವಾಗುತ್ತಿರುವ ಸರ್ಕಾರದ ನಿಲುವಿನಿಂದ ಗಾಬರಿಗೊಳ್ಳುತ್ತಿದ್ದಾರೆ.

ಮೈಸೂರು ನಗರದ ಸೋಂಕು ರೋಗ ಆಸ್ಪತ್ರೆಯಲ್ಲಿ ಪ್ಲೇಗ್ ರೋಗ ಶಂಕಿತ ಆರು ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರ ರಕ್ತದ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳಿಸಿದ್ದರೂ ಫಲಿತಾಂಶ ಮಾತ್ರ ಪ್ರಕಟವಾಗಿಲ್ಲ.

Post Comments (+)