ಶನಿವಾರ, ಆಗಸ್ಟ್ 24, 2019
28 °C
1994

ಹುಬ್ಬಳ್ಳಿ ನಗರ ಪ‍್ರವೇಶ ಬಂದ್

Published:
Updated:

ಹುಬ್ಬಳ್ಳಿ ನಗರ ಪ‍್ರವೇಶ ಬಂದ್

ಹುಬ್ಬಳ್ಳಿ, ಆ. 14– ವಿವಾದಗ್ರಸ್ತ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂಘ ಪರಿವಾರದ ಯತ್ನವನ್ನು ಶತಾಯ ಗತಾಯ ತಡೆಯಲು ಕಂಕಣಬದ್ಧರಾದ ಪೊಲೀಸ್ ಪಡೆಗಳಿಂದ ಮೈದಾನದ ಸುತ್ತ ಅಡೆತಡೆಗಳ ‘ಚಕ್ರವ್ಯೂಹ’ ರಚನೆ. ಪೊಲೀಸರ ಕಣ್ತಪ್ಪಿಸಿ ನಗರಕ್ಕೆ ನುಸುಳಿರುವ ಬಿಜೆಪಿ ನಾಯಕಿ ಉಮಾಭಾರತಿ ನೇತೃತ್ವ ದಲ್ಲಿ, ಯಾವುದೇ ಅಡ್ಡಿ ಬಂದರೂ ನಾಳೆ ಧ್ವಜಾರೋಹಣ ಖಚಿತವೆಂಬ ಪಣದ ಪುನರುಚ್ಚಾರ.

ಈ ಮಧ್ಯೆ, ಇಡೀ ಹುಬ್ಬಳ್ಳಿ ನಗರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ, ಹೊರ ಊರು ಗಳಿಂದ ಬರುವ ವಾಹನಗಳ ನಿಷೇಧ. ಹೆಜ್ಜೆ, ಹೆಜ್ಜೆಗೆ ಪೊಲೀಸ್ ದಂಡು. ಕ್ಷಣ ಕ್ಷಣಕ್ಕೆ ಸೈರನ್ ಕೂಗಿಸುತ್ತಾ ಓಡಾಡುವ ಜೀಪುಗಳು. ಇಡೀ ರಾಷ್ಟ್ರದ ಗಮನವನ್ನೇ ಸೆಳೆದಿರುವ ಈದ್ಗಾ ಮೈದಾನ ವಿವಾದದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಇಂದಿನ
ವಿದ್ಯಮಾನಗಳಿವು.

ಸಂಸದೀಯ ಪ್ರಜಾತಂತ್ರ ಕಾಪಾಡಲು ರಾಷ್ಟ್ರಪತಿ ಕರೆ

ನವದೆಹಲಿ, ಆ. 14 (ಪಿಟಿಐ)–  ಸಂಸ ದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಬಲ ಪಡಿಸುವ ಮೂಲಕ ನಾವು ನಮ್ಮ ದೇಶದ ಘನತೆ– ಗೌರವ ಕಾಪಾಡುವ ಪಣ ತೊಡ ಬೇಕು ಎಂದು ರಾಷ್ಟ್ರಪತಿ ಡಾ. ಶಂಕರ ದಯಾಳ್ ಶರ್ಮಾ ಕರೆ ನೀಡಿದ್ದಾರೆ.

ಸ್ವಾತಂತ್ರ್ಯದ ಮುನ್ನಾ ದಿನ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ದೇಶ ಅಚಲವಾಗಿ ನಂಬಿರುವ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವವನ್ನು ಪ್ರತಿಬಿಂಬಿಸಿದ್ದಾರೆ. ಸರ್ಕಾರದ ಹೊಣೆ ಯರಿತ ನಿರ್ಧಾರಗಳು ಶಾಸಕಾಂಗಕ್ಕೆ ಹೇಗೆ ಪ್ರಧಾನವೋ ಜನತೆಯೊಂದಿಗೆ ಪ್ರತಿ ನಿಧಿಗಳು ಹೊಂದಿರಬೇಕಾದ ಬದ್ಧತೆಯೂ ಅಷ್ಟೇ ಮಹತ್ವದ್ದಾಗಿದೆ ಎಂದಿದ್ದಾರೆ.

Post Comments (+)