ಖಾಸಗಿ ಶಾಲೆಯೊಂದರ ವಾರ್ಷಿಕೋತ್ಸವವನ್ನು ವೀಕ್ಷಿಸಲು ಈಚೆಗೆ ಹೋಗಿದ್ದೆ. ಸುಮಾರು 4 ಗಂಟೆಯ ಕಾರ್ಯಕ್ರಮ. ಒಂದೇ ರೀತಿಯ ಹಾಡು–ಕುಣಿತಗಳು ಏಕತಾನತೆ ಹುಟ್ಟಿಸಿದವು. ವರ್ಷವಿಡೀ ಪಾಠ ಪರೀಕ್ಷೆಗಳಲ್ಲಿ ಮುಳುಗಿದ ಮಕ್ಕಳಿಗೆ ಸ್ವಲ್ಪ ಮನರಂಜನೆ ಮತ್ತು ಅವರ ಸುಪ್ತ ಮನಸ್ಸಿನಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರತೆಗೆಯಲು ರಂಗ ಚಟುವಟಿಕೆಗಳು ಉತ್ತಮ ಮಾರ್ಗ. ಆದರೆ ಇಲ್ಲಾಗುತ್ತಿರುವುದೇನು? ನಾಟಕ, ಅಭಿನಯ, ಏಕಪಾತ್ರ ಅಭಿನಯ, ಛದ್ಮವೇಷ, ಜನಪದ–ವಚನ ಸಾಹಿತ್ಯ ಮುಂತಾದವುಗಳಿಗೆ ಬ್ರೇಕ್ ಹಾಕಿ ಅಬ್ಬರ ಸಂಗೀತದ, ಅಶ್ಲೀಲ ಸಾಹಿತ್ಯದ ಹಾಡುಗಳಿಗೆ ಎಳೆಯ ಮಕ್ಕಳನ್ನು ಕುಣಿಸುವುದು ತರವೇ?

ಈ ಶಾಲೆಗಳು, ಮಕ್ಕಳನ್ನು ಮುಂದಿನ ಜೀವನಕ್ಕೆ ತಯಾರು ಮಾಡುತ್ತಿವೆಯೋ ಇಲ್ಲವೇ ರಿಯಾಲಿಟಿ ಷೋಗಳಿಗೆ ತಯಾರು ಮಾಡುತ್ತಿವೆಯೋ? ಇಂತಹ ಶಾಲೆಯಿಂದ ಹೊರಬರುವ ಮಕ್ಕಳಿಂದ ಆರೋಗ್ಯಕರ ಸಮಾಜವನ್ನು ನಿರೀಕ್ಷಿಸಲು ಸಾಧ್ಯವೇ? ಪೋಷಕರು ಈ ಕುರಿತು ಚಿಂತಿಸಬೇಕು. ಶಾಲೆಯೊಂದನ್ನು ಆಯ್ದುಕೊಳ್ಳುವಾಗ ಅದು ಹೊಂದಿರುವ ಮಾಧ್ಯಮ, ಭೌತಿಕ ಸೌಕರ್ಯಗಳೊಂದಿಗೆ ಶಾಲೆಯು ನಡೆಸುವ ಚಟುವಟಿಕೆಗಳು ಆರೋಗ್ಯಕರವೇ ಎಂದು ಪರಿಶೀಲಿಸಬೇಕು. ಬಾರುಗಳಿಗೆ ಅನುಮತಿ ನೀಡುವ ಮುನ್ನ ಮೂಲ ಸೌಕರ್ಯಗಳನ್ನು ನಿರೀಕ್ಷಿಸುವ ಸರ್ಕಾರವು ಖಾಸಗಿ ಶಾಲೆಗಳಿಗೆ ಅನುಮತಿ ನೀಡುವಾಗ ಎಡವುವುದೇಕೆ? ಮೂಲ ಸೌಕರ್ಯಗಳಿಲ್ಲದ ಶಾಲೆಗಳ ಅನುಮತಿ ರದ್ದುಗೊಳಿಸಿ ಸರ್ಕಾರಿ ಶಾಲೆಗಳನ್ನು ಉನ್ನತ ದರ್ಜೆಗೇರಿಸುವುದು ಸರ್ಕಾರ–ಸಮಾಜದ ಆದ್ಯ ಕರ್ತವ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.