ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನಿಗೆ ಹೆಣ್ಣು ಕೊಡದ ರೈತ!

Last Updated 24 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಲಿಂಗಾನುಪಾತದ ಅಸಮತೋಲನದಿಂದ ಯುವಕರು ಮದುವೆಯಾಗಲು ಹೆಣ್ಣು ಸಿಗದಂತಾಗಿದೆ ಎಂಬ ಲಕ್ಷ್ಮೀಕಾಂತರಾಜು ಎಂ.ಜಿ. ಅವರ ಅಭಿಪ್ರಾಯವನ್ನು ಒಪ್ಪುವುದು ಕಷ್ಟ. ಇಂದಿನ ಯುವತಿಯರು ಹುಡುಗನ ವಿದ್ಯಾಭ್ಯಾಸ, ಸಂಪಾದನೆ, ಆಸ್ತಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ. ತನಗಿಂತ ಎತ್ತರವಿರಬೇಕು ಅಥವಾ ಸರಿಸಮನಾಗಿರಬೇಕು, ಹಣಕಾಸಿನ ವಿಚಾರದಲ್ಲಿ ಭದ್ರತೆ ಇರಬೇಕು ಎಂದು ಬಯಸುವವರೇ ಹೆಚ್ಚು. ಹೀಗಾಗಿ ಇಂತಹ ಪರಿಸ್ಥಿತಿ ಉಂಟಾಗಿದೆ.

ಲಿಂಗಾನುಪಾತದ ಅಸಮತೋಲನವು ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಇದೆ. ಆದರೆ ಮದುವೆಯಾಗದ ಯುವಕರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ರೈತರಿಗೆ, ಸಣ್ಣ ಉದ್ಯೋಗಿಗಳಿಗೆ, ಸ್ವ ಉದ್ಯೋಗಿಗಳಿಗೆ ಹೆಣ್ಣು ಸಿಗುವುದು ಕಷ್ಟವಾಗಿದೆ. ದುರದೃಷ್ಟವೆಂದರೆ, ಒಬ್ಬ ರೈತ ಯುವಕ ತಾನು ರೈತನಾದ್ದರಿಂದ ತನಗೆ ಹೆಣ್ಣು ಸಿಗುತ್ತಿಲ್ಲ ಎಂದು ದುಃಖಿಸುತ್ತಾನೆ. ಆದರೆ ತನ್ನ ಸಹೋದರಿಯನ್ನು ಇನ್ನೊಬ್ಬ ರೈತನಿಗೆ ಕೊಟ್ಟು ಮದುವೆ ಮಾಡಲು ಸಿದ್ಧನಿರುವುದಿಲ್ಲ.

⇒ಸುನೀಲ ಟಿ.ಪಿ.,ಮಳವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT