ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಮನಸುಗಳು ಕೆಟ್ಟಿಲ್ಲ!

Last Updated 18 ನವೆಂಬರ್ 2018, 20:01 IST
ಅಕ್ಷರ ಗಾತ್ರ

ರವೀಂದ್ರ ಭಟ್ಟ ಅವರ, ‘ಎದೆಗೆ ಬಿದ್ದ ಅಕ್ಷರ ಫಲ ಕೊಟ್ಟಂಗಿಲ್ಲ’ (ಪ್ರ.ವಾ., ನ. 18) ಲೇಖನಕ್ಕೆ ಈ ಪ್ರತಿಕ್ರಿಯೆ: ಅಂಕಣಕಾರರು ಬದಲಾಗದ ಭಾರತೀಯ ಕೊಳಕು ಮನಸ್ಸುಗಳ ಬಗ್ಗೆ ಬರೆಯುತ್ತಾ, ‘ಮಾನವೀಯ ಸೇತುವೆ ಕಟ್ಟಬೇಕು’ ಎಂದು ಸರಿಯಾಗಿಯೇ ಹೇಳಿದ್ದಾರೆ. ನಮ್ಮ ಮನಸ್ಸುಗಳು ಹಲವು ವಿಚಾರಗಳಲ್ಲಿ ಹತ್ತಿರವಿದ್ದಂತೆ ಕಂಡರೂ ಸಾಮಾಜಿಕ ನ್ಯಾಯ, ಸಮಾನತೆಯಂತಹ ವಿಷಯಗಳಲ್ಲಿ ಅಂತರ ಕಾಯ್ದುಕೊಳ್ಳುವ ಜಾಣ್ಮೆಯನ್ನು ಬಹು ಜತನದಿಂದ ಕಾಪಾಡಿಕೊಂಡು ಬರುತ್ತಿರುವುದು ದುರದೃಷ್ಟಕರ. ಆದರೆ ಭಾರತೀಯ ಮನಸ್ಸುಗಳೆಲ್ಲವೂ ಕೊಳಕಾಗಿಲ್ಲ, ಭಾರಿ ಪ್ರತಿರೋಧದ ನಡುವೆಯೂ ಜಾತಿ– ಧರ್ಮಗಳ ನಡುವೆ ಬಾಂಧವ್ಯ ಬೆಸೆಯುವ ಹಾಗೂ ಇಂಥ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಬೆಂಬಲಿಸುವ ಮನಸ್ಸುಗಳೂ ಇವೆ ಎಂಬುದೇ ಸಮಾಧಾನದ ಸಂಗತಿ.

ಬದಲಾಗಲೇಬೇಕಾದ ಭಾರತೀಯ ಮನಸ್ಸುಗಳಿಗೆ ಕುವೆಂಪು ಅವರ ವಿಶ್ವಮಾನವ ಸಂದೇಶ ನಿಜಕ್ಕೂ ಔಷಧಿಯಾಗಬಲ್ಲದು.

ಮಧುಕುಮಾರ ಸಿ.ಎಚ್., ಚಾಮನಹಳ್ಳಿ, ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT