ಭಾನುವಾರ, ಸೆಪ್ಟೆಂಬರ್ 19, 2021
23 °C

ಪಲಾಯನವಾದದ ಉತ್ತರ ಸರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು, ‘ಒಂದು ಪೆಟ್ರೋಲ್‌, ಒಂದು ಟೊಮೆಟೊ, ಒಂದು ಈರುಳ್ಳಿ ಬಗ್ಗೆ ನಾನು ಮಾತನಾಡಲ್ಲ. ಆರ್ಥಿಕ ತಜ್ಞರ ರೀತಿಯಲ್ಲಿ ನೀವು ಪ್ರಶ್ನೆ ಕೇಳಬೇಕು’ ಎಂದು ಹೇಳುವ ಮೂಲಕ ಪಲಾಯನವಾದದ ಉತ್ತರ ನೀಡಿದ್ದಾರೆ.

ಪೆಟ್ರೋಲ್, ಡೀಸೆಲ್, ಗ್ಯಾಸ್, ಈರುಳ್ಳಿ, ಟೊಮೆಟೊ ದೇಶದ ಸಾಮಾನ್ಯ ನಾಗರಿಕರು ಪ್ರತಿನಿತ್ಯ ಉಪ ಯೋಗಿಸುವ ಅಗತ್ಯ ವಸ್ತುಗಳಾಗಿವೆ. ದೇಶದಲ್ಲಿ ಕಡಿಮೆ ಜನರಿಗೆ ನೀಡುತ್ತಿರುವ ಸೌಲಭ್ಯವನ್ನು ದೊಡ್ಡದಾಗಿ ಹೇಳುತ್ತಾ, ಬಹುಪಾಲು ಜನ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಾ ಹೋಗುವುದು ಸರಿಯಲ್ಲ. ಕೇವಲ ಚುನಾವಣಾ ತಂತ್ರಗಳಿಗೆ ಆಶ್ವಾಸನೆಗಳು ಸೀಮಿತವಾಗದಿರಲಿ. ಜನಸಾಮಾನ್ಯರ ಬವಣೆಗಳ ಕಡೆ ಗಮನವಿರಲಿ.    ಡಾ. ಎಚ್.ಮಲ್ಲತ್ತಹಳ್ಳಿ ತುಕಾರಾಂ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.