ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾತಃಸ್ಮರಣೀಯರ ಅನುಕರಣೀಯ ನಡೆ

Last Updated 7 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

1976ರ ಮಾತಿದು. ಕನ್ನಡ ಚಿತ್ರರಂಗದ ಕಲಾಭೀಷ್ಮ ಆರ್.ನಾಗೇಂದ್ರರಾಯರು ಜನಮನ್ನಣೆ ಗಳಿಸಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲವದು. ಕೇಂದ್ರ ಸರ್ಕಾರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಿತ್ತು. ಅಂದು ತಮ್ಮ ಮನೆಯ ವರಾಂಡದಲ್ಲಿ ಕುಳಿತು ಯುವಕನೊಬ್ಬ ದಿನಪತ್ರಿಕೆ ಓದುತ್ತಿದ್ದ. ಅಲ್ಲಿ ದಪ್ಪ ಅಕ್ಷರಗಳಲ್ಲಿ ‘ರಾಷ್ಟ್ರ ಮಟ್ಟದಲ್ಲಿ ಹಾರಿದ ಕನ್ನಡ ಧ್ವಜ- ಇಂದು ನಾಗೇಂದ್ರರಾಯರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ’ ಎಂಬ ಸುದ್ದಿ ಇತ್ತು.

ಓದುತ್ತಾ ಆ ಯುವಕ ರಸ್ತೆಯೆಡೆಗೆ ನೋಡಿ ಹೌಹಾರಿದ. ಅಲ್ಲಿ ತಳ್ಳುಗಾಡಿಯೊಂದರ ಎದುರು ಸ್ವತಃ ನಾಗೇಂದ್ರರಾಯರು ತರಕಾರಿ ಖರೀದಿಸುತ್ತಿದ್ದರು. ಅವರ ಬಳಿ ಹೋಗಿ ಯುವಕ ಕೇಳಿದ. ‘ಏನ್ಸಾರ್ ಇದು? ಈವತ್ತು ಪ್ರಶಸ್ತಿ ತಗೊಳ್ಳುವುದನ್ನು ಬಿಟ್ಟು ಇಲ್ಲಿಯೇ ಇದ್ದೀರಲ್ಲ?’ ನಾಗೇಂದ್ರರಾಯರು ನಸುನಕ್ಕು ಹೇಳಿದರು. ‘ಅಯ್ಯೋ, ನನ್ನ ಪದ್ಮಶ್ರೀ (ಪತ್ನಿ) ಮನೆಯಲ್ಲಿಯೇ ಇದ್ದಾಳಪ್ಪ. ಅವಳಿಗಿಂತ ಹೆಚ್ಚಿನ ಪ್ರಶಸ್ತಿ ನನಗೆ ಇವರೇನು ಕೊಟ್ಟಾರು?’ ಯುವಕ ಅವಾಕ್ಕಾದ. ವಶೀಲಿಬಾಜಿ, ಹಣಬಲ, ರಾಜಕೀಯ ಒತ್ತಡಗಳಿಂದಲೇ ಪ್ರಶಸ್ತಿ ಗಳಿಸುವ ಇಂದಿನ ಜನರನ್ನು ಗಮನಿಸಿದಾಗ, ನಾಗೇಂದ್ರರಾಯರು ನಿಜಕ್ಕೂ ಅನುಕರಣೀಯರು, ಪ್ರಾತಃಸ್ಮರಣೀಯರು. ನಾಳೆ (ಫೆ. 9) ಅವರ ಪುಣ್ಯಸ್ಮರಣೆ. ಅವರಿಗೊಂದು ನಮನ.

- ಕೆ.ಶ್ರೀನಿವಾಸರಾವ್,ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT