ಶಾಲೆಯಿಂದ ಜಾಗೃತಿ

7

ಶಾಲೆಯಿಂದ ಜಾಗೃತಿ

Published:
Updated:

‘ಪ್ಲಾಸ್ಟಿಕ್‌’ ಈಗ ಜಗತ್ತಿನ ಮುಂದೆ ಬೃಹದಾಕಾರವಾಗಿ ಬೆಳೆದುನಿಂತಿರುವ ಸಮಸ್ಯೆಯಾಗಿದೆ. ‘ನಿಷೇಧ’ ಎಂಬ ಒಂದೇ ಬಾಣದಿಂದ ಈ ರಾಕ್ಷಸನನ್ನು ಹೊಡೆದುರುಳಿಸುವುದು ಅಸಾಧ್ಯ. ವಿವಿಧ ಹಂತಗಳ ಸಂಘಟಿತ ಪ್ರಯತ್ನದಿಂದ ಮಾತ್ರ ಪ್ಲಾಸ್ಟಿಕ್ ಮಾಲಿನ್ಯವನ್ನು ನಿಯಂತ್ರಿಸಬಹುದು.

ಈ ನಿಟ್ಟಿನಲ್ಲಿ ವೈಯಕ್ತಿಕವಾಗಿ ಪ್ರತಿಯೊಬ್ಬರೂ ಮಾಡಬಹುದಾದ ಕೆಲಸವೆಂದರೆ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು. ಇದರ ಜೊತೆಗೆ ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಶಾಲೆಗಳು ಈ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬಲ್ಲವು.

ವಿಪರ್ಯಾಸವೆಂದರೆ, ಹೆಚ್ಚಿನ ಶಾಲೆಗಳಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಲೇಖನ ಸಾಮಗ್ರಿಗಳನ್ನು ಬಳಸುವಂತೆ ಮಕ್ಕಳಿಗೆ ಉತ್ತೇಜನ ನೀಡಲಾಗುತ್ತದೆ. ಪಠ್ಯೇತರ ಚಟುವಟಿಕೆ ಮತ್ತು ಪ್ರಾಜೆಕ್ಟ್‌ಗಳಿಗೆ ಥರ್ಮಾಕೋಲ್, ಕೃತಕ ಸಂಯೋಗದ ಅಂಟು, ಬಣ್ಣ ಮುಂತಾದ ವಸ್ತುಗಳನ್ನು ಉಪಯೋಗಿಸಲು ಶಿಕ್ಷಕರು ಮಕ್ಕಳಿಗೆ ಸೂಚಿಸುತ್ತಾರೆ.

ಇದಕ್ಕೆ ಪರ್ಯಾಯವಾಗಿ, ಉಪಯೋಗಿಸಿದ ಕಾಗದ ಮತ್ತು ರಟ್ಟುಗಳಿಂದ ಕಲಾಕೃತಿಗಳನ್ನು ರಚಿಸಲು ಹೇಳಿದರೆ, ಮಕ್ಕಳ ಕಲ್ಪನೆ ಗರಿಗೆದರುವುದರೊಂದಿಗೆ ಪರಿಸರದ ಬಗ್ಗೆ ಅರಿವೂ ಮೂಡುತ್ತದೆ. ಶಾಲೆಗಳಲ್ಲೂ ಮರದಿಂದ ತಯಾರಿಸಿದ ವಿವಿಧ ಘನಾಕೃತಿಗಳನ್ನು ಇಟ್ಟಿರಬೇಕು. ಇವುಗಳನ್ನು ಬಗೆಬಗೆಯಾಗಿ ಜೋಡಿಸಿ ಅನೇಕ ರೀತಿಯ ಕಲಾಕೃತಿಗಳನ್ನು ತಯಾರಿಸುವಂತಿರಬೇಕು. ಇವು ಮರುಬಳಕೆಗೂ ಒದಗುತ್ತವೆ. ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳಿಗೂ ಈ ಬಗ್ಗೆ ಸೂಚನೆ ನೀಡುವುದು ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !