ಶನಿವಾರ, ನವೆಂಬರ್ 23, 2019
18 °C

‘ಭಾರತರತ್ನ’ಕ್ಕೆ ಕಸ್ತೂರಬಾ ಅರ್ಹರು

Published:
Updated:

ಕಸ್ತೂರಬಾ ‘ಭಾರತರತ್ನ’ ಯಾಕಾಗಬಾರದು ಎಂದು ರಘುನಾಥ ಚ.ಹ. ತಮ್ಮ ಲೇಖನದಲ್ಲಿ (ಪ್ರ.ವಾ., ಅ. 22) ಕೇಳಿರುವುದು ಸಾಂದರ್ಭಿಕವೂ, ಪ್ರಸ್ತುತವೂ ಆಗಿದೆ.

ಅರ್ಧನಾರೀಶ್ವರರಂತೆ ನಿಜಜೀವನದಲ್ಲಿ, ಸಾಮಾಜಿಕ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿ- ಕಸ್ತೂರಬಾ ಬದುಕಿದ್ದರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಕಸ್ತೂರಬಾ ಅವರ ಸೇವೆಯನ್ನು ಮರೆಯುವಂತಿಲ್ಲ.

‘ಸ್ವಚ್ಛತಾ ಅಭಿಯಾನ’ ಈಗ ಬಿರುಸು ಪಡೆದಿದೆ. ಆದರೆ, ಅಂದೇ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದ ಕಸ್ತೂರಬಾ ಅವರು ಭಾರತರತ್ನ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ.

– ಸಿ.ಸಿದ್ಧರಾಜು ಆಲಕೆರೆ, ಡಬ್ಲಿನ್ (ಐರ್ಲೆಂಡ್)

ಪ್ರತಿಕ್ರಿಯಿಸಿ (+)