ಸೋಮವಾರ, ನವೆಂಬರ್ 23, 2020
22 °C

ವಾಚಕರ ವಾಣಿ: ಯಾವುದೇ ಅಲೆಯಿಲ್ಲದ ಬಿಹಾರ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಜಯ ಗಳಿಸಿದೆ. ಮಹಾಘಟಬಂಧನ್ ಕೂಟವು ತೀವ್ರ ಸ್ಪರ್ಧೆಯೊಡ್ಡಿದೆ. ಅದೇನೇ ಇರಲಿ, ಗೆಲುವು ಗೆಲುವೇ ಆಗಿರುತ್ತದೆ, ನಿಜ. ಆದರೆ ಯಾವುದೇ ಅಲೆಯಿಲ್ಲದ ಚುನಾವಣೆಗೆ ಬಿಹಾರವು ಸಾಕ್ಷಿಯಾಗಿದೆ. ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 1,57,01,226 ಮತಗಳನ್ನು ಮತ್ತು ಮಹಾಘಟಬಂಧನ್ ಕೂಟವು 1,56,88,458 ಮತಗಳನ್ನು ಪಡೆದಿವೆ. ಎನ್‌ಡಿಎ ಮೈತ್ರಿಕೂಟವು ತನ್ನ ಎದುರಾಳಿಗಿಂತ ಕೇವಲ 12,768 ಮತಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ಮೂರು ಕೋಟಿಗೂ ಹೆಚ್ಚು ಮತದಾನದಲ್ಲಿ ಈ ಸಂಖ್ಯೆಯ ಬಹುಮತ ತೀರಾ ಕಡಿಮೆ. ಶೇಕಡಾವಾರು ಮತದಾನವನ್ನು ತೆಗೆದುಕೊಂಡರೆ, ಎನ್‌ಡಿಎ ಮೈತ್ರಿಕೂಟವು 37.26ರಷ್ಟನ್ನೂ ಮಹಾಘಟಬಂಧನ್ ಕೂಟವು 37.23ರಷ್ಟನ್ನೂ ಪಡೆದಿದ್ದು ಶೇ 0.03ರಷ್ಟು ಮಾತ್ರ ಅಂತರವಿದೆ.

ಒಂದು ವರ್ಷದ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ತಾನು ಗಳಿಸಿದ ಮತಗಳಿಗಿಂತ ಈ ಚುನಾವಣೆಯಲ್ಲಿ ಶೇ 12ರಷ್ಟು ಕಡಿಮೆ ಮತಗಳನ್ನು ಗಳಿಸಿದೆ. ಈ ಅಂಕಿ ಅಂಶಗಳ ಕಟು ವಾಸ್ತವವು ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಯಾವುದೇ ಅಥವಾ ಯಾರದೇ ಅಲೆಯೂ ಇರಲಿಲ್ಲ ಎಂಬ ಸತ್ಯವನ್ನು ಸಾರುತ್ತದೆ. ಪ್ರಜಾಸತ್ತಾತ್ಮಕ ಸಮೀಪ ಸ್ಪರ್ಧೆಗೆ ಸಾಕ್ಷಿಯಾಗಿದೆ.

–ಬರಗೂರು ರಾಮಚಂದ್ರಪ್ಪ, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು