ಸೋಮವಾರ, ಮೇ 23, 2022
30 °C

ಮಾದರಿ ಸ್ವಾಮೀಜಿಯಾಗಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಸ್ವಾಮೀಜಿಯಾಗಲು ಹೊರಟಿರುವ ರಾಜಕಾರಣಿ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಕೆ.ವಿ.ವಾಸು ಅವರು ‘ಪರಮಾರ್ಥ ಅರಿತ ರಾಜಕಾರಣಿ’ ಎಂದಿರುವುದು (ವಾ.ವಾ., ಏ. 8) ಸರಿಯಷ್ಟೆ. ಆದರೆ ಪುಟ್ಟಸ್ವಾಮಿ ಅವರು ಪೀಠಾಧಿಪತಿಯಾಗಲು ಮುಂದಾಗಿರುವುದು ಅವರಲ್ಲಿ ಹುಟ್ಟಿದ ವೈರಾಗ್ಯದಿಂದಾಗಲೀ ಅನುಭಾವದಿಂದಾಗಲೀ ಅಲ್ಲ. ಸ್ವಾಮೀಜಿಯೊಬ್ಬರು ‘ದೇವಿಯು ನೀವೇ ಪೀಠಾಧಿಪತಿಯಾಗಬೇಕೆಂದು ನುಡಿದಿದ್ದಾಳೆ’ ಎಂದು ಹೇಳಿದ ಭವಿಷ್ಯವಾಣಿಯಿಂದ ರೋಮಾಂಚನಗೊಂಡು ದಿಢೀರ್ ನಿರ್ಧಾರಕ್ಕೆ ಬಂದಿರುವುದು ಸ್ಪಷ್ಟ.

ಸಕಲ ಶಿಷ್ಟಾಚಾರ ಪಾಲಿಸಿಯೇ ಪೀಠವನ್ನು ಅಲಂಕರಿಸಿದ ಹಲವಾರು ಸ್ವಾಮೀಜಿಗಳು ಪೀಠಕ್ಕೆ ನ್ಯಾಯ ಒದಗಿಸಲಾರದೆ ತಲ್ಲಣವನ್ನು ಅನುಭವಿಸುತ್ತಿರುವ ಈ ಹೊತ್ತಿನಲ್ಲಿ, ಪುಟ್ಟಸ್ವಾಮಿ ಅವರ ನಡೆ ಮಾದರಿಯಾಗಲಿ ಎಂದು ಆಶಿಸೋಣ.

- ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು