ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕುಸಿತ: ಹೊಣೆ ಯಾರು?

Last Updated 29 ಸೆಪ್ಟೆಂಬರ್ 2021, 18:27 IST
ಅಕ್ಷರ ಗಾತ್ರ

ಕಟ್ಟಡ ಕುಸಿತ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಕೆಲ ಘಟನೆಗಳಲ್ಲಿ ಪ್ರಾಣಾಪಾಯ ಸಂಭವಿಸದೇ ಇದ್ದರೂ ಇವುಗಳನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಆಶ್ಚರ್ಯವೆಂದರೆ, ಇಂಥ ಪ್ರಕರಣಗಳು ನಡೆದಾಗ ಮಾತ್ರ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಎಚ್ಚೆತ್ತುಕೊಂಡು ವರದಿ ಕೇಳುವುದು, ಸಮಿತಿ ರಚಿಸುವುದು, ನೋಟಿಸ್ ಜಾರಿಯಂತಹ ಕೆಲಸಗಳನ್ನು ಮಾಡುತ್ತದೆ. ಇಂತಹ ಪ್ರಕ್ರಿಯೆಗಳು ಮತ್ತೆ ನೆನಪಾಗುವುದು ಮತ್ತೊಂದು ಕಟ್ಟಡ ಕುಸಿದಾಗಲೇ.

ಬಿಬಿಎಂಪಿ ಪ್ರಕಾರ, ದುಃಸ್ಥಿತಿಯಲ್ಲಿರುವ 178 ಕಟ್ಟಡಗಳನ್ನು 2019ರಲ್ಲಿ ಗುರುತಿಸಲಾಗಿತ್ತು. ಆದರೆ ಮಾಲೀಕರ ವಿರುದ್ಧ ಕ್ರಮವೂ ಇಲ್ಲ, ಅದರ ಮಾಹಿತಿಯೂ ಬಿಬಿಎಂಪಿ ಬಳಿ ಇಲ್ಲ. ಕೇವಲ ನಿಯೋಜನೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಮತ್ತೆ ಮತ್ತೆ ಬದಲಾಗುವ ಆಯಕಟ್ಟಿನ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇನ್ನೇನು ನಿರೀಕ್ಷೆ ಇಟ್ಟುಕೊಳ್ಳಬಹುದು? ಪ್ರಸ್ತುತ ಪರಿಸ್ಥಿತಿಯಲ್ಲಿ, ದುಃಸ್ಥಿತಿಯಲ್ಲಿರುವ ಕಟ್ಟಡಗಳ ಮಾಲೀಕರಿಗೆ ಕಟ್ಟಡ ನೆಲಸಮ ಅಥವಾ ನವೀಕರಣಕ್ಕೆ ಸಂಬಂಧಿಸಿದಂತೆ ಮೊದಲು ಗಡುವು ನೀಡಬೇಕು. ನಿಗದಿತ ಗಡುವಿನೊಳಗೆ ಮಾಲೀಕರು ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ, ಬಿಬಿಎಂಪಿಯೇ ಮುಂದಾಗಿ ಇಂತಹ ಕಟ್ಟಡಗಳನ್ನು ನೆಲಸಮ ಮಾಡಬೇಕು. ಅದರ ಖರ್ಚನ್ನು ಮಾಲೀಕರೇ ಭರಿಸಬೇಕು. ಆಗ ಮಾತ್ರ ಕಟ್ಟಡ ಕುಸಿತ ಪ್ರಕರಣಗಳು ನಿಯಂತ್ರಣಕ್ಕೆ ಬರಲು ಸಾಧ್ಯ.

–ಸುಘೋಷ ಸ. ನಿಗಳೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT