ಶುಕ್ರವಾರ, ಮೇ 14, 2021
27 °C

ಜಾತಿ ವ್ಯವಸ್ಥೆ: ಅವರವರ ಇಷ್ಟಕ್ಕೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿರುವ ಜಾತಿ ವ್ಯವಸ್ಥೆಯ ಬಗ್ಗೆ ಡಾ. ಸಬಿತಾ ಬನ್ನಾಡಿ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಏ. 22) ಆಕ್ಷೇಪಣಾ ರೀತಿಯಲ್ಲಿ ಬರೆದಿದ್ದಾರೆ. ಜಾತಿ ವ್ಯವಸ್ಥೆಯನ್ನು ಪಾಲಿಸುವವರು ಆಧುನಿಕತೆಗೆ ವಿರುದ್ಧವಾದವರು ಎಂದು ಬಿಂಬಿಸಿದ್ದಾರೆ. ನನ್ನ ಪ್ರಕಾರ, ಜಾತಿ ವ್ಯವಸ್ಥೆ ಪಾಲನೆಗೂ ಆಧುನಿಕ ಚಿಂತನೆಗೂ ಒಂದಕ್ಕೊಂದು ಸಂಬಂಧ ಇಲ್ಲ. ಜಾತಿ ವ್ಯವಸ್ಥೆ ಪಾಲಿಸುವುದು ಒಂದು ಪಾಪವೇ? ಪಾಶ್ಚಾತ್ಯ ದೇಶಗಳು ಹಾಗೂ ಕಮ್ಯುನಿಸ್ಟ್ ಬುದ್ಧಿಜೀವಿಗಳು ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಅಭಿಪ್ರಾಯವನ್ನು ನಮ್ಮ ಮೇಲೆ ಹೇರಿದ್ದಾರೆ ಅನಿಸುತ್ತದೆ. ಇಂದಿನ ಯುವಪೀಳಿಗೆಯು ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುವವರನ್ನೂ ಒಬ್ಬ ಅಪರಾಧಿಯಂತೆ ನೋಡುತ್ತದೆ. ಜಾತಿ ವ್ಯವಸ್ಥೆಯನ್ನು ನಂಬಿ, ಅದನ್ನು ಸಾಧ್ಯವಾದಷ್ಟು ಅವರವರ ಅನುಕೂಲಕ್ಕಾಗಿ ಪಾಲಿಸಿಕೊಂಡು ಬಂದರೆ ಇತರರಿಗೆ ಆಗುವ ತೊಂದರೆಯಾದರೂ ಏನು? ಅದನ್ನು ಅವರವರ ಇಷ್ಟಕ್ಕೆ ಬಿಟ್ಟರೆ ತಪ್ಪೇನು?

ಮೇಲ್ಜಾತಿ ಮತ್ತು ಕೆಳಜಾತಿ ಎಂಬುದೆಲ್ಲಾ ಅವರವರ ಸಂಕುಚಿತ ಮನೋಭಾವದ ಪರಿಣಾಮದಿಂದ ಬಂದಿರುವಂಥದ್ದು. ಎಲ್ಲರೂ ಅವರವರ ಜಾತಿಯೇ ಅತ್ಯಂತ ಉಚ್ಚ ಮಟ್ಟದ್ದು, ಇತರ ಜಾತಿಗಳು ಅವರದಕ್ಕಿಂತ ಕೀಳು ಎಂದೇ ಭಾವಿಸುತ್ತಾರೆ. ನಮ್ಮ ಕಾನೂನುಗಳನ್ನು ಮಾತ್ರ ಎಲ್ಲ ಜಾತಿ, ಮತ, ಪಂಗಡಗಳಿಗೂ ಒಂದೇ ರೀತಿ ಅನ್ವಯಿಸುವಂತೆ ಮಾಡಿರುವುದು ಸರಿಯಾಗಿಯೇ ಇದೆ. ಇಲ್ಲದಿದ್ದಲ್ಲಿ ಬಹುಸಂಖ್ಯಾ ಜಾತಿಯವರು ಅಲ್ಪಸಂಖ್ಯಾ ಜಾತಿಯವರ ಮೇಲೆ ದಬ್ಬಾಳಿಕೆ ಮಾಡುವ ಅವಕಾಶ ಇರುತ್ತಿತ್ತು. ಆದ್ದರಿಂದ ಇಂದಿನ ಸಮಾಜದಲ್ಲಿ ಜನರು ಅವರವರ ಇಷ್ಟದಂತೆ ಇರಲು ಬಿಡಬೇಕು. ಜಾತಿ ವ್ಯವಸ್ಥೆ ಪಾಲಿಸುವವರನ್ನು ಹೀಯಾಳಿಸುವುದು ನಿಲ್ಲಬೇಕು. ಯಾರಾದರೂ ಅಂತರ್ಜಾತಿ ವಿವಾಹವಾದರೆ ಅವರನ್ನು ತುಚ್ಚೀಕರಿಸುವುದು ಅಥವಾ ವೈಭವೀಕರಿಸುವುದು ನಿಲ್ಲಬೇಕು.

ಸತೀಶ ಎಂ.ಎಸ್. ಭಟ್ಟ, ಬೆಂಗಳೂರು

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.