ಭಾನುವಾರ, ಜನವರಿ 26, 2020
28 °C

ಮಕ್ಕಳ ಮರಣ: ನ್ಯೂನತೆಗಳಿಗೆ ಹಿಡಿದ ಕೈಗನ್ನಡಿ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಗುಜರಾತ್ ಹಾಗೂ ರಾಜಸ್ಥಾನದ ಹಲವು ಪ್ರಮುಖ ಆಸ್ಪತ್ರೆಗಳಲ್ಲಿ ಮೂರು ತಿಂಗಳಲ್ಲಿ 900ಕ್ಕೂ ಹೆಚ್ಚು ಮಕ್ಕಳು ಮರಣ ಹೊಂದಿರುವುದು (ಪ್ರ.ವಾ., ಜ. 8) ಅತ್ಯಂತ ಕಳವಳಕಾರಿ. ವಿಶ್ವದಲ್ಲಿ ಅತಿಹೆಚ್ಚು ಶಿಶುಮರಣಗಳು ಭಾರತದಲ್ಲೇ ಸಂಭವಿಸುತ್ತಿವೆ ಎಂಬ ಅಂಶ ನಾಚಿಕೆಗೇಡಿನ ಸಂಗತಿ. ಇದು, ದೇಶದ ಆರೋಗ್ಯ ಕ್ಷೇತ್ರದ ಊನಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

ಯಾವುದೇ ದೇಶದ ಸರ್ವಾಂಗೀಣ ಅಭಿವೃದ್ಧಿಯು ಆರೋಗ್ಯ ಸೇವೆ ಮತ್ತು ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ದುರಂತವೆಂದರೆ, ಇವು ಈಗ ಸೇವಾಕ್ಷೇತ್ರಗಳಾಗಿ ಉಳಿಯದೆ ವ್ಯಾಪಾರಿ ಕ್ಷೇತ್ರಗಳಾಗಿ ಮಾರ್ಪಟ್ಟಿವೆ. ನೈರ್ಮಲ್ಯ ಹಾಗೂ ಪೌಷ್ಟಿಕತೆಯ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಿ, ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳು ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸುವಂತೆ ಮಾಡಬೇಕಾಗಿದೆ.

ಡಿ.ಎಂ.ಬಸೆಟ್ಟೆಪ್ಪ, ಎಚ್.ವೀರಾಪುರ, ಕುರುಗೋಡು

ಪ್ರತಿಕ್ರಿಯಿಸಿ (+)