ಭಾನುವಾರ, ನವೆಂಬರ್ 27, 2022
26 °C

ಆಗಲೇ ಅಗತ್ಯವಿತ್ತೆ ಶುದ್ಧೀಕರಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐವತ್ತು ವರ್ಷಗಳ ಹಿಂದೆಯೇ ಕಾಂಗ್ರೆಸ್ ಮಲಿನಗೊಂಡಿತ್ತೇ? ‘ಪ್ರಜಾವಾಣಿ’ಯ ‘50 ವರ್ಷಗಳ ಹಿಂದೆ’ ಅಂಕಣ (ಅ.1) ಗಮನಿಸಿದಾಗ ಈ ಮಾತು ನಿಜ ಅನಿಸುತ್ತದೆ. ಅಂದು ಕೆಂಗಲ್‌ ಹನುಮಂತಯ್ಯ ಅವರು ಕಾಂಗ್ರೆಸ್ ಶುದ್ಧೀಕರಣಕ್ಕೆಂದು ಮೂರು ವಾರಗಳ ಕಾಲ ಅಜ್ಞಾತವಾಸದಲ್ಲಿದ್ದು ಧ್ಯಾನಕ್ಕೆ ಕುಳಿತುಕೊಂಡ ವಿಚಾರ ಪ್ರಸ್ತುತದಲ್ಲಿ ಸಮಯೋಚಿತ. ರಾಹುಲ್ ಗಾಂಧಿ ಅವರ ‘ಭಾರತ್‌ ಜೋಡೊ’ ಯಾತ್ರೆಯನ್ನು ಕೂಡ ಕಾಂಗ್ರೆಸ್ ಶುದ್ಧೀಕರಣದ ಮತ್ತೊಂದು ಮಜಲು ಎಂದು ಭಾವಿಸಬಹುದು. ಆ ಪಕ್ಷ ಪರಿಶುದ್ಧಗೊಂಡು ಪುನಃ ಅಧಿಕಾರ ವಹಿಸಿಕೊಳ್ಳುವುದೇ? ಕಾಯ್ದು ನೋಡಬೇಕಿದೆ.

–ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.