ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೇಂದ್ರೀಕರಣಗೊಳ್ಳಲಿ ಸರ್ಕಾರಿ ಕಚೇರಿ

Last Updated 17 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಬೆಂಗಳೂರಿನ ಆನಂದರಾವ್ ವೃತ್ತದ ಬಳಿ ₹ 1,250 ಕೋಟಿ ವೆಚ್ಚದಲ್ಲಿ 50 ಮಹಡಿಗಳ ಅವಳಿ ಗೋಪುರ ಕಟ್ಟಡ ಕಟ್ಟಲು ಸರ್ಕಾರ ನಿರ್ಧರಿಸಿರುವುದು ವಿರ್ಪಯಾಸದ ಸಂಗತಿ. ಈಗಾಗಲೇ ಈ ವೃತ್ತದ ಬಳಿ ವಾಹನ ಸಂಚಾರ ತೀವ್ರವಾಗಿದೆ. ಯಾವುದೇ ಪ್ರತಿಭಟನೆ ಸಂದರ್ಭದಲ್ಲಿ, ರೈಲು ನಿಲ್ದಾಣದಿಂದ ಹೊರಟ ಮೆರವಣಿಗೆಯು ರಾಜಭವನಕ್ಕೆ ಮನವಿ ಸಲ್ಲಿಸಲು ತೆರಳುವಾಗ ಮತ್ತು ಅಲ್ಲೇ ಸಮೀಪವಿರುವ ಗಾಂಧಿ ವೃತ್ತದ ಹತ್ತಿರ ಕುಳಿತು ಸತ್ಯಾಗ್ರಹ ಮಾಡುವಾಗ ಆಗುವ ಟ್ರಾಫಿಕ್ ಜಾಮ್‌ನಿಂದ ಜನ ಬಹಳ ಕಷ್ಟಪಡುತ್ತಿದ್ದಾರೆ. ಈ ಸಮಯದಲ್ಲಿ ವಾಯುಮಾಲಿನ್ಯವೂ ಅತಿಯಾಗಿರುತ್ತದೆ.

ಉದ್ದೇಶಿತ ಈ ಬಹುಮಹಡಿ ಕಟ್ಟಡಗಳಲ್ಲಿ ಹಲವಾರು ಕಚೇರಿಗಳು ಬರುವುದರಿಂದ, ಇವುಗಳ ಸಿಬ್ಬಂದಿ, ಕಚೇರಿಗೆ ಬಂದುಹೋಗುವ ಜನ, ಕಾವಲು ಸಿಬ್ಬಂದಿ, ಕ್ಯಾಂಟೀನ್ ನಡೆಸುವವರು, ಸಾಮಾನು ಸರಂಜಾಮು ತಲುಪಿಸುವವರು, ಇವರೆಲ್ಲ ಬಂದು ಹೋಗುವ ವಾಹನಗಳ ಸಾಂದ್ರತೆ ಎಲ್ಲವೂ ಸೇರಿದರೆ ನಗರದ ಈ ಕೇಂದ್ರ ಭಾಗ ಏನಾಗುತ್ತದೆ ಎಂಬುದನ್ನು ಊಹಿಸುವುದು ಅಸಾಧ್ಯ. ಸರ್ಕಾರ ಈ ವಿಷಯದಲ್ಲಿ ಆತುರ ಮಾಡದೆ, ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ಸಲಹೆ ಪಡೆದು ಮುಂದಡಿ ಇಡಬೇಕು. ಈ ಬಹುಮಹಡಿ ಕಟ್ಟಡಗಳಲ್ಲಿ ಅಡಕ ಮಾಡಬೇಕೆಂದಿರುವ ಕಚೇರಿಗಳನ್ನು ಹಾಗೂ ಈಗಾಗಲೇ ನಗರದ ಕೇಂದ್ರ ಭಾಗದಲ್ಲಿರುವ ಇನ್ನು ಕೆಲವು ಕಚೇರಿಗಳನ್ನು ವಿಕೇಂದ್ರೀಕರಣಗೊಳಿಸಿ, ನಗರದ ಎಂಟು ದಿಕ್ಕುಗಳಲ್ಲಿ ಇರುವಂತೆ ಮಾಡಿದರೆ, ಕೇಂದ್ರ ಭಾಗವು ವಾಯುಮಾಲಿನ್ಯ ಮತ್ತು ಸಂಚಾರ ದಟ್ಟಣೆಯಿಂದ ಮುಕ್ತವಾಗುತ್ತದೆ.‌

-ಕಳಲೆ ವರದರಾಜನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT