ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಣಿಗೆ ಕೊಟ್ಟರೆ ಸಾಲದು

Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಜನಪ್ರತಿನಿಧಿಗಳು ಬರೀ ಹಣವನ್ನು ದೇಣಿಗೆ ಕೊಟ್ಟು ಕುಳಿತರೆ ಸಾಲದು. ತಮ್ಮ ಕ್ಷೇತ್ರದಲ್ಲಿನ ಸ್ಥಿತಿಗತಿಯನ್ನು ಅವರು ಅವಲೋಕಿಸಬೇಕು. ಕೊರೊನಾ ಸೋಂಕು ತಡೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಹಲವು ಇಲಾಖಾ ಸಿಬ್ಬಂದಿಯನ್ನು ಉತ್ತೇಜಿಸಬೇಕು. ತಮ್ಮ ಗುರುತರ ಜವಾಬ್ದಾರಿಯನ್ನು ಅಧಿಕಾರಿಗಳ ಹೆಗಲಿಗೇರಿಸಿ, ತಾವು ಅಜ್ಞಾತವಾಸದಲ್ಲಿ ಇರುವುದು ಸೂಕ್ತವಲ್ಲ.

ಅವರು ಕ್ಷೇತ್ರದಲ್ಲಿ ಓಡಾಡುತ್ತಿದ್ದರೆ ಆಡಳಿತಯಂತ್ರ ಸರಾಗವಾಗಿ ತಿರುಗುತ್ತದೆ. ಚುನಾವಣಾ ಸಮಯದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿ, ಜನರಿಗೆ ಆಶ್ವಾಸನೆ ಕೊಟ್ಟು ಮತ ಯಾಚಿಸುವ ಉತ್ಸಾಹ ಈಗಲೂ ಎದ್ದು ಕಾಣಲಿ.

-ಗಣಪತಿ ನಾಯ್ಕ, ಕಾನಗೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT