ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಬಳಕೆ: ಸಭ್ಯತೆಯ ಪಾಠ ಸಾಕು

ಅಕ್ಷರ ಗಾತ್ರ

ಒಂದು ಬಾರಿ ಬಳಸಿ ಬಿಸಾಡುವ ಒಂದು ಮಾಸ್ಕಿಗೆ ಕನಿಷ್ಠ ₹ 15, ವಾರ, ತಿಂಗಳು ಇಟ್ಟುಕೊಳ್ಳುತ್ತೇವೆ ಅಂದರೆ ಕನಿಷ್ಠ ₹ 100 ಬೇಕು. ಐದು ಜನರ ಕುಟುಂಬ ಸಾಧಾರಣವಾದ ಮಾಸ್ಕ್ ಧರಿಸಿ ಓಡಾಡಲು ದಿನಕ್ಕೆ ₹ 75 ವ್ಯಯಿಸಬೇಕು. ಹದಿನೈದು ದಿನಕ್ಕೆ ಬದಲಿಸುವ ಮಾಸ್ಕ್ ಆದರೆ ತಿಂಗಳಿಗೆ ₹ 1,000 ಹೊಂದಿಸಬೇಕು!

ಭಾರತದ ಎಷ್ಟು ಕುಟುಂಬಗಳಿಗೆ ಒಳ್ಳೆಯ ಆಹಾರ, ಆರೋಗ್ಯ, ಶಿಕ್ಷಣ, ನೀರು, ಮೂಲ ಸೌಕರ್ಯಗಳ ಜೊತೆಗೆ ಮಾಸ್ಕ್ ವೆಚ್ಚವನ್ನೂ ಹೊಂದಿಸಲು ಸಾಧ್ಯವಿದೆ? ಕನಿಷ್ಠ ಶೇಕಡ 30ರಷ್ಟು ಕುಟುಂಬಗಳು ಕಡುಬಡತನದ ಸ್ಥಿತಿಯಲ್ಲಿ ಇವೆ. ಅವರ ಕೈಯಲ್ಲಿ ಖಂಡಿತ ಈ ವೆಚ್ಚ ಭರಿಸಲಾಗದು. ಆ ಕಾರಣಕ್ಕೆ ರಸ್ತೆಯಲ್ಲಿ ಮುಖಕ್ಕೆ ತುಂಡು ಬಟ್ಟೆ ಮುಚ್ಚಿಕೊಂಡು ಓಡಾಡುವವರ ಸಂಖ್ಯೆ ಹೆಚ್ಚಾಗಿ ಕಾಣುತ್ತದೆ. ಸೊಪ್ಪು, ತರಕಾರಿ ಮಾರುವವರು, ದಿನಗೂಲಿ ನೌಕರರು, ಹಾಲು, ಪೇಪರ್ ಹಾಕುವವರು, ಪೌರಕಾರ್ಮಿಕರು ಮುಂತಾದವರು ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಹೀನಾಯವಾಗಿ ಕಾಣುವುದನ್ನು, ಸಭ್ಯತೆಯ, ನಾಗರಿಕತೆಯ ಪಾಠ ಮಾಡುವುದನ್ನು ನಾವು ಬಿಡಬೇಕಿದೆ. ಈ ವರ್ಗಗಳಿಗೆ ಉಚಿತ ಮಾಸ್ಕ್ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ.

- ಕಿರಣ್ ಗಾಜನೂರು, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT