ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮಕ್ಕಳ ಮೇಲೆ ದುಷ್ಪರಿಣಾಮ ಆಗದಿರಲಿ

Last Updated 29 ಏಪ್ರಿಲ್ 2021, 20:01 IST
ಅಕ್ಷರ ಗಾತ್ರ

ಕೊರೊನಾ ಎಂಬ ಪದ ಕೇಳುತ್ತಿದ್ದಂತೆಯೇ ಕೆಲವು ಮಕ್ಕಳಲ್ಲಿ ವಿಚಿತ್ರ ವರ್ತನೆ ಕಾಣಿಸಿಕೊಳ್ಳುತ್ತಿರುವ ಸುದ್ದಿ(ಪ್ರ.ವಾ., ಏ. 28) ಓದಿ ಮನಸ್ಸಿಗೆ ಆಘಾತವಾಯಿತು. ಕೋವಿಡ್‌ ಎಂಬುದು ಕೆಲವರಿಗೆ ದೈಹಿಕ ರೋಗವಾಗಿಪರಿಣಮಿಸಿದ್ದರೆ, ಇನ್ನು ಕೆಲವರಿಗೆ ಮಾನಸಿಕ ಕಾಯಿಲೆಯಾಗಿದೆ. ಅದರಲ್ಲಿಯೂ ಏನೂ ಅರಿಯದ ಮಕ್ಕಳ ಮನಸ್ಸಿನ ಮೇಲೆ ಈ ಕಾಯಿಲೆ ಪರಿಣಾಮ ಬೀರಿದೆ. ಇದಕ್ಕೆ ಕಾರಣ, ತಿಳಿವಳಿಕೆ ಇಲ್ಲದ ಪೋಷಕರು ಹಾಗೂ ಕೆಲ ಮಾಧ್ಯಮಗಳು.

ಕೊರೊನಾ ಎಂದರೆ ‘ಭಯ ಬೇಡ ಜಾಗೃತಿ ಇರಲಿ’ ಎಂಬ ಮಾತನ್ನು ಹಲವಾರು ಬಾರಿ ಕೇಳುತ್ತಲೇ ಇದ್ದರೂ, ಕೆಲ ಮಾಧ್ಯಮಗಳು ಕೊರೊನಾ ಎಂಬ ಪದವನ್ನು ಭಯ ಹುಟ್ಟಿಸುವ ರೀತಿಯಲ್ಲಿ ಅನೇಕ ಬಾರಿ ಹೇಳಿ ಹೇಳಿ ಜನರ ಮನಸ್ಸಿನಲ್ಲಷ್ಟೇ ಅಲ್ಲ ಮಕ್ಕಳ ಮನಸ್ಸಿನಲ್ಲೂ ಅದು ಅಚ್ಚಳಿಯುವಂತೆ ಮಾಡಿವೆ. ಮಕ್ಕಳ ಮುಂದೆ ದೃಶ್ಯ ಮಾಧ್ಯಮಗಳನ್ನುವೀಕ್ಷಿಸುವುದನ್ನು ಪೋಷಕರು ನಿಲ್ಲಿಸಲಿ. ಬದಲಾಗಿ ಕೊರೊನಾದ ಬಗ್ಗೆ ಮಕ್ಕಳ ಜೊತೆ ಚರ್ಚಿಸಿ ಸೂಕ್ತ ಅರಿವು ಮೂಡಿಸಲಿ. ದೇಶದ ಭವಿಷ್ಯದ ಪ್ರಜೆಗಳೆನಿಸಿರುವ ಮಕ್ಕಳ ಮೇಲೆ ದುಷ್ಪರಿಣಾಮಗಳಾಗದಂತೆ ನೋಡಿಕೊಳ್ಳಬೇಕಾದಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
-ಯೋಗೇಶ್ ವೈ.ಸಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT