ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ ಅಪರಾಧಿಗಳ ಸ್ವರ್ಗ!

ಅಕ್ಷರ ಗಾತ್ರ

ಗೋವಾ- ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಂತಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಕರ್ನಾಟಕದ ಅತಿ ಹಿಂದುಳಿದ ತಾಲ್ಲೂಕುಗಳಲ್ಲೊಂದು. ದಟ್ಟ ಅರಣ್ಯದಿಂದ ಕೂಡಿದ ಈ ಪ್ರದೇಶ ಇತ್ತೀಚೆಗೆ ಅಪರಾಧಿಗಳ ಸ್ವರ್ಗವಾಗುತ್ತಿದೆ.

‘ಛಾಪಾ ಕಾಗದ ಹಗರಣ’ದ ಕರೀಂ ಲಾಲ್‌ ತೆಲಗಿಯಿಂದಾಗಿ ಖಾನಾಪುರ ತಾಲ್ಲೂಕು ಕುಪ್ರಸಿದ್ಧಿ ಪಡೆಯಿತು. ಆನಂತರ ಇಲ್ಲಿನ ಅರಣ್ಯ ಪ್ರದೇಶವು ಬಳ್ಳಾರಿ ಗಣಿಗಳ್ಳರಅಕ್ರಮ ಅದಿರು ಅಡಗಿಸಿಡುವ ತಾಣವಾಗಿ ಕುಖ್ಯಾತವಾಯಿತು. ಗಣಿ ಅಕ್ರಮ ವಿಪರೀತಕ್ಕೆ ಹೋಗಿ ಇಲ್ಲಿ ಕೊಲೆಗಳೂ ನಡೆದವು. ಈಗ ಗೌರಿ ಲಂಕೇಶ್ ಹತ್ಯೆಯ ಆರೋಪಿ ಪರಶುರಾಮ ವಾಘ್ಮೋರೆ ಕಾರಣಕ್ಕೆ ಖಾನಾಪುರ ಸುದ್ದಿಯಲ್ಲಿದೆ.

ವಾಘ್ಮೋರೆ ವಿಜಯಪುರ ಜಿಲ್ಲೆಯವನಾದರೂ ಅವನುಗುಂಡು ಹಾರಿಸುವ ತರಬೇತಿ ಪಡೆದಿದ್ದು ಖಾನಾಪುರದ ಅರಣ್ಯದಲ್ಲಿ. ಈ ತಾಲ್ಲೂಕಿನ ಜಾಂಬೋಟಿ, ಲೋಂಡಾ ಅರಣ್ಯಗಳು ಕ್ರಿಮಿನಲ್‌ಗಳ ತರಬೇತಿ ಕೇಂದ್ರಗಳಾಗಿರುವಂತಿವೆ. ಅಲ್ಲಿ ಎಷ್ಟು ಮರಿ ವೀರಪ್ಪನ್‌ಗಳು ಇದ್ದಾರೋ ಏನೋ! ದೂರದ ಬೆಂಗಳೂರಿನಲ್ಲಿ ಕುಳಿತಿರುವ ಕರ್ನಾಟಕ ಸರ್ಕಾರದವರಿಗೆ ಬೆಳಗಾವಿ ಜಿಲ್ಲೆಯ ಅರಣ್ಯದಲ್ಲಿ ನಡೆಯುವ ಕ್ರಿಮಿನಲ್ ಚಟುವಟಿಕೆಯ ಅಂದಾಜು ಇರಲಿಕ್ಕಿಲ್ಲ. ಪೊಲೀಸ್ ಹಾಗೂ ಗುಪ್ತಚರ ಇಲಾಖೆಗಳು ಖಾನಾಪುರ ತಾಲ್ಲೂಕಿನ ಅರಣ್ಯಗಳತ್ತ ಸ್ವಲ್ಪ ಗಮನ ಹರಿಸುವುದು ಅಗತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT