ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಗೆ ಶರಣಾಗುವ ಬದಲು ಛಲದಿಂದ ಬದುಕಿದ್ದರೆ...

Last Updated 3 ಅಕ್ಟೋಬರ್ 2019, 7:21 IST
ಅಕ್ಷರ ಗಾತ್ರ

ಮೈಸೂರಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ವ್ಯಕ್ತಿಯೊಬ್ಬರ ಪತ್ನಿ ಮತ್ತು ಇಬ್ಬರು ಮಕ್ಕಳು ಮನನೊಂದು ಬಂಟ್ವಾಳ ಸಮೀಪ ನದಿಗೆ ಹಾರಿ ಜೀವ ಬಿಟ್ಟಿರುವುದು ಹೃದಯವಿದ್ರಾವಕ ಘಟನೆ. ಭೂಮಿಯ ಮೇಲೆ ಯಾರೂ ಶಾಶ್ವತರಲ್ಲ. ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇಬೇಕು. ಕುಟುಂಬದ ಒಬ್ಬರು ಸತ್ತರೆಂದು ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡರೆ ಹೇಗೆ? ಇದರಿಂದ ಅವರು ಸಾಧಿಸುವುದಾದರೂ ಏನನ್ನು? ಈ ಮಕ್ಕಳು 29 ಮತ್ತು 27 ವರ್ಷದವರಾಗಿದ್ದು, ದುಡಿಯುವ ವಯಸ್ಸಿಗೆ ಬಂದಿದ್ದರು. ಇವರೇ ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡು ಛಲದಿಂದ ಬದುಕಿದ್ದರೆ ಸಾರ್ಥಕ ಜೀವನ ನಡೆಸಬಹುದಾಗಿತ್ತು. ‘ಮಾನವ ಜನ್ಮ ದೊಡ್ಡದು. ಇದ ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ’ ಎನ್ನುವ ದಾಸರ ನುಡಿಯನ್ನು ಅರಿತು ಬಾಳಬೇಕು.

-ರಾಜು ಬಿ. ಲಕ್ಕಂಪುರ,ಜಗಳೂರು

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT