ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಪ್ರದರ್ಶನಾತ್ಮಕ ರಾಷ್ಟ್ರಪ್ರೇಮವಷ್ಟೇ ಸಾಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

'ಟೋಕಿಯೊ ಒಲಿಂಪಿಕ್ಸ್ ಮುಗಿಯುತ್ತ ಬಂತಲ್ಲ, ಆದರೆ ಭಾರತಕ್ಕೆ ಒಂದು ಚಿನ್ನದ ಪದಕವೂ ಬಂದಿಲ್ಲವಲ್ಲ’ ಎಂದುಕೊಳ್ಳುತ್ತಿರುವಾಗ ಜಾವೆಲಿನ್ ಸ್ಪರ್ಧೆಯಲ್ಲಿ ಅದು ಸಿಕ್ಕಿದೆ. ‘ಸಿಕ್ಸ್ ಹಂಡ್ರೆಡ್ ಮಿಲಿಯನ್ ಅಂಡ್ ನಾಟ್ ಈವನ್ ಎ ಗೋಲ್ಡ್’ (ಅರವತ್ತು ಕೋಟಿ ಜನ, ಆದರೂ ಒಂದು ಸ್ವರ್ಣ ಪದಕ ಇಲ್ಲ)– ಹಲವು ವರ್ಷಗಳ ಹಿಂದಿನ ನ್ಯೂಸ್ ಸ್ಟೋರಿಯ ಶೀರ್ಷಿಕೆ. ಈಗ ಒಟ್ಟು ಏಳು ಪದಕಗಳು, ನೂರ ಮೂವತ್ತು ಕೋಟಿ ಜನರ ಕ್ರೀಡಾಪ್ರತಿನಿಧಿಗಳಾಗಿ ಹೋಗಿದ್ದ ನೂರ ಇಪ್ಪತ್ತಾರು ಸ್ಪರ್ಧಿಗಳ ಸಾಧನೆ. ನಮ್ಮ ಮುಖ್ಯ ಸಾಮರ್ಥ್ಯ (ಕೋರ್ ಕಾಂಪಿಟೆನ್ಸ್) ಹಾಕಿ, ಕುಸ್ತಿ- ಪದಕಗಳು ಬಂದಿವೆ; ಕೆಲವರು ವೈಯಕ್ತಿಕವಾಗಿ ಕೆಲವು ಕ್ರೀಡೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಿಂಚುತ್ತಿದ್ದಾರೆ (ಉದಾಹರಣೆಗೆ ಷಟ್ಲ್ ಬ್ಯಾಡ್ಮಿಂಟನ್)- ಅವರ ಸಾಧನೆ ನಿರೀಕ್ಷೆಗಿಂತ ಕಡಿಮೆ.

ಕೆಲವು ಈವೆಂಟ್‌ಗಳಲ್ಲಿ ಭಾರತ ಎಂಟ್ರಿ ಕೊಟ್ಟಿದೆ. ಆದರೆ ‘ನಾವೂ ಓಡಿದೆವು’ ಎಂದಂತೆ ಆಗಿದೆ. ಪ್ರಶಸ್ತಿ ವಿಜೇತರಿಗೆ ನಗದು ಪುರಸ್ಕಾರ ಘೋಷಿಸುವ ಸ್ಪರ್ಧೆಯೇ ನಡೆದಿದೆ. ಆದರೆ ಮೂರೇ ವರ್ಷಗಳಲ್ಲಿ ಬರುವ ಮುಂದಿನ ಒಲಿಂಪಿಕ್ಸ್‌ಗೆ, ಯಾವುದರಲ್ಲಿ ಭಾಗವಹಿಸಲೇಬೇಕು ಎಂಬುದೂ ಸೇರಿ ಇನ್ನಷ್ಟು ಸೂಕ್ತ ಆಯ್ಕೆ, ತರಬೇತಿ ಹೆಚ್ಚು ಉಪಯುಕ್ತವಾದೀತು. ಹೀರೊ ವರ್ಷಿಪ್, ಪ್ರದರ್ಶನಾತ್ಮಕ ರಾಷ್ಟ್ರಪ್ರೇಮ ಕೆಲಮಟ್ಟಿಗೆ ಕೆಲಸ ಮಾಡಬಹುದಷ್ಟೆ. ಸರ್ಕಾರ, ಸಂಘ–ಸಂಸ್ಥೆಗಳು ಇದನ್ನು ಅರಿಯುವುದೊಳಿತು.

ಎಚ್.ಎಸ್.ಮಂಜುನಾಥ, ಗೌರಿಬಿದನೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು