ಹಿರಿಯರ ಬಗ್ಗೆ ಅಸಡ್ಡೆ

7

ಹಿರಿಯರ ಬಗ್ಗೆ ಅಸಡ್ಡೆ

Published:
Updated:

ಈ ತಿಂಗಳ ಒಂದರಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುದಗಲ್ಲ ಶಾಖೆಗೆ ಹಣ ತುಂಬಲು ಹೋಗಿದ್ದೆ. ಅಂದು ಸರತಿ ಸಾಲಿನಲ್ಲಿ ತುಂಬ ಗದ್ದಲ. ನನ್ನ ಕಾಲಿಗೆ ಶಸ್ತ್ರ ಚಿಕಿತ್ಸೆಯಾಗಿತ್ತು. ಬಹಳ ಹೊತ್ತು ನಿಲ್ಲುವುದಕ್ಕಾಗುತ್ತಿರಲಿಲ್ಲ. ಶಾಖಾ ವ್ಯವಸ್ಥಾಪಕರನ್ನು ಬೆಟ್ಟಿಯಾಗಿ ನನ್ನ ತೊಂದರೆ ಹೇಳಿಕೊಂಡೆ. ‘ನಾವೇನು ಮಾಡಕ್ಕಾಗುತ್ತದೆ. ಯಾರನ್ನಾದರು ಕರೆದುಕೊಂಡು ಬನ್ನಿ, ಇಲ್ಲದಿದ್ದರೆ ಸಾಲಿನಲ್ಲಿ ನಿಲ್ಲಿ’ ಎಂದು ಹೇಳಿದರು. ಸೌಜನ್ಯವಿಲ್ಲದೆ ಇವರ ಸಂಗಡ ವಾದ ಮಾಡಿ ಏನು ಪ್ರಯೋಜನ ಎಂದು ಎರಡೂವರೆ ತಾಸು ನಿಲ್ಲಬೇಕಾಯಿತು.

ಹಣ ತುಂಬುವ ಆ ಕೌಂಟರ್‌ನಲ್ಲಿ ಪುರುಷರಿಗೆ ಒಂದು ಸಾಲು, ಮಹಿಳೆಯರಿಗೆ ಒಂದು ಸಾಲು. ಅಷ್ಟೊತ್ತಿಗೆ ಮಹಿಳೆಯ ಸಾಲಿನಲ್ಲಿ ನಿಂತಿದ್ದ ಹೆಣ್ಣು ಮಗಳು ಮೂರ್ಛೆ ಬಂದು ಬಿದ್ದುಬಿಟ್ಟಳು. ಸಾಲಿನಲ್ಲಿ ನಿಂತವರು ಒಬ್ಬರು ಕೈಗೆ ಕೀ ಕೊಟ್ಟರು. ಮತ್ತೊಬ್ಬರು ಹೆಬ್ಬೆರಳು ತುಳಿದು ನೀರು ಚುಮುಕಿಸಿದರು. ಆ ಬಳಿಕ ಮಹಿಳೆಗೆ ಪ್ರಜ್ಞೆ ಬಂತು. ಇಷ್ಟೆಲ್ಲ ಗದ್ದಲವಾದರೂ ವ್ಯವಸ್ಥಾಪಕರು ಜಾಣ ಮೌನ ವಹಿಸಿದ್ದು ತುಂಬಾ ಬೇಜಾರಾಯಿತು.

ಅ. 1, ವಿಶ್ವ ಹಿರಿಯ ನಾಗರಿಕರ ದಿನ. ದಿನಪತ್ರಿಕೆಯ ಅಂದಿನ ಮೊದಲನೇ ಪುಟದಲ್ಲಿ ಅವರ ಗುಣಗಾನ. ಅಂದಿನ ಈ ಪ್ರಸಂಗ ನೋಡಿದ ಮೇಲೆ ಹಿರಿಯರಿಗೆ ಎಷ್ಟು ಗೌರವ ಇದೆ ಎಂಬುದು ಗೊತ್ತಾಯಿತು. ಇನ್ನು ಮುಂದಾದರೂ ಬ್ಯಾಂಕಿನಲ್ಲಿ ಹಿರಿಯ ನಾಗರಿಕರಿಗೆ ಬೇರೆ ವ್ಯವಸ್ಥೆ ಮಾಡಲಿ. ಇಂತಹ ತೊಂದರೆ ನಿವಾರಿಸಲಿ.

ಬಸನಗೌಡ, ಬನ್ನಿಗೋಳ, ಲಿಂಗಸುಗೂರ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !