ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ದಾನಿಗಳ ಶೋಧ ಕಾರ್ಯ!

ಅಕ್ಷರ ಗಾತ್ರ

‘ಕಲಿಕಾ ಚೇತರಿಕೆ’ ಕಾರ್ಯಕ್ರಮಕ್ಕೆ ಬೇಕಾದಂತಹ ಬೋಧನಾ ಸಾಮಗ್ರಿಯ ಪೂರೈಕೆಗೆ ಅನುದಾನದ ಕೊರತೆಯಾಗಿರುವ ಸುದ್ದಿ ಓದಿ ಬೇಸರವಾಯಿತು (ಪ್ರ.ವಾ., ಜೂನ್‌ 30). ಅಲ್ಲದೆ ಕಲಿಕಾ ಚೇತರಿಕೆಯ ಹಾಳೆಗಳನ್ನು ಜೆರಾಕ್ಸ್ ಮಾಡಿಸಲು ಸ್ವತಃ ಶಿಕ್ಷಕರೇ ದಾನಿಗಳ ಬಳಿ ಹಣ ಸಂಗ್ರಹಿಸಬೇಕು ಎಂದು ಸುತ್ತೋಲೆ ಹೊರಡಿಸಿರುವುದು ವಿಷಾದನೀಯ. ಶಿಕ್ಷಕರನ್ನು ಜನಗಣತಿಯಿಂದ ಚುನಾವಣಾ ಕರ್ತವ್ಯದವರೆಗೆ ದುಡಿಸಿಕೊಳ್ಳುತ್ತಿದ್ದಾರೆ. ಈಗ ದಾನಿಗಳನ್ನು ಪತ್ತೆ ಮಾಡುವ ಕೆಲಸವನ್ನೂ ಅವರಿಗೆ ಹೆಚ್ಚುವರಿಯಾಗಿ ಹೊರಿಸಿ, ಅವರ ಬೆನ್ನು ಬಾಗುವಂತೆ ಮಾಡಿರುವುದು ತರವಲ್ಲ. ಪತ್ತೆ ಕಾರ್ಯದಲ್ಲಿ ವಿಫಲರಾದ ಶಿಕ್ಷಕರು ಜೆರಾಕ್ಸ್‌ಗೆ ಬೇಕಾಗುವ ಹಣವನ್ನು ತಮ್ಮ ಜೇಬಿನಿಂದಲೇ ಭರಿಸಬೇಕಂತೆ!

ಪ್ರತಿಮೆಗಳಿಗೆ, ಭವನಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ಉದಾಹರಣೆಗಳು ಕಣ್ಣಮುಂದೆಯೇ ಇವೆ. ಹೀಗಿರುವಾಗ, ಭವಿಷ್ಯದಲ್ಲಿ ಉತ್ತಮ‌ ಸಮಾಜ ನಿರ್ಮಾಣದಂತಹ ಮಹತ್ಕಾರ್ಯ ಸಾಧಿಸಲು ಇರುವ ಏಕೈಕ ಮಾರ್ಗವಾದಂತಹ ಶಿಕ್ಷಣ ಕ್ಷೇತ್ರಕ್ಕೆ ಹಣವನ್ನು ನೀಡದೆ ಸರ್ಕಾರ ನುಣುಚಿಕೊಳ್ಳುತ್ತಿರು
ವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ.

ಗುಣಮಟ್ಟದ ಶಿಕ್ಷಣವನ್ನು ಇಂದಿನ ಮಕ್ಕಳಿಗೆ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಇಂದು ನಾವು ಎಚ್ಚೆತ್ತುಕೊಳ್ಳದಿದ್ದರೆ ಇತಿಹಾಸ ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ.

– ಈರಣ್ಣ ಎನ್.ವಿ.,ನಾರಾಯಣಪುರ, ಶಿರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT