ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ಹುಟ್ಟಿಸಬೇಡಿ!

Last Updated 26 ಜುಲೈ 2018, 19:30 IST
ಅಕ್ಷರ ಗಾತ್ರ

ಶುಕ್ರವಾರ (ಜುಲೈ 27) ನಡೆಯಲಿರುವ ಖಗ್ರಾಸ ಚಂದ್ರಗ್ರಹಣ ಕುರಿತು ಕೆಲವು ಸುದ್ದಿಮಾಧ್ಯಮಗಳು ಅನಗತ್ಯ ಭಯ ಸೃಷ್ಟಿಸುತ್ತಿವೆ. ತಲೆಬುಡವಿಲ್ಲದ ಭವಿಷ್ಯ–ಜ್ಯೋತಿಷವನ್ನು, ಕಾಕತಾಳೀಯವಾಗಿ ಜರುಗಿದ ಕೆಲವು ದುರ್ಘಟನೆಗಳಿಗೆ ತಳಕು ಹಾಕಿ, ಪ್ರಳಯದ ಭೀತಿ ಸೃಷ್ಟಿಸಿ ಜನರಲ್ಲಿ ಗೊಂದಲ ಮೂಡಿಸಿವೆ.

‘ಗ್ರಹಣದ ಪರಿಣಾಮ ಭೀಕರವಾಗಿರುತ್ತದೆ’ ಎಂದಿರುವ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ, ಇದರಿಂದತಮಗೇನೂ ಭಯವಿಲ್ಲ ಎಂದೂ ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಮತ್ತು ಮಾಧ್ಯಮಗಳು ಇಂಥ ಭಯ ಸೃಷ್ಟಿಸುವ ಚಾಳಿಯನ್ನು ಬಿಡಬೇಕು.

ಗ್ರಹಣ ಎಂಬ ನೈಸರ್ಗಿಕ ಪ್ರಕ್ರಿಯೆ ಹೇಗೆ ಸಂಭವಿಸುತ್ತದೆ ಎಂಬ ವೈಜ್ಞಾನಿಕ ಅರಿವನ್ನು ಜನರಲ್ಲಿ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಮೌಢ್ಯಕ್ಕೆ ಒತ್ತು ನೀಡಿ, ಜನರಲ್ಲಿ ಗೊಂದಲ ಮೂಡಿಸುವ ಪ್ರವೃತ್ತಿಯನ್ನು ಬಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT