ಪ್ರೇರಣೆಗೆ ಬಗ್ಗದವರಿಗೆ ವಿನೂತನ ಮಾರ್ಗ

ಶುಕ್ರವಾರ, ಏಪ್ರಿಲ್ 26, 2019
31 °C

ಪ್ರೇರಣೆಗೆ ಬಗ್ಗದವರಿಗೆ ವಿನೂತನ ಮಾರ್ಗ

Published:
Updated:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ನೀಡುವ ಟಿಕೆಟ್ ಮೇಲೆ ‘ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿದೆಯೇ? ಪರಿಷ್ಕೃತ ಪಟ್ಟಿ ಪರಿಶೀಲಿಸಿ’ ಎಂದು ಮುದ್ರಿಸಲಾಗಿದೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಸಾರಿಗೆ ಸಂಸ್ಥೆಯ ಈ ಅಭಿಯಾನ ಸ್ತುತ್ಯರ್ಹ.

ಎಷ್ಟೇ ಪ್ರೇರಣೆ ಕೊಟ್ಟರೂ ಕೆಲವರು ಮತದಾನದ ಪ್ರಕ್ರಿಯೆಯಿಂದ ಹೊರಗೇ ಉಳಿದುಬಿಡುತ್ತಾರೆ. ಅಂತಹವರನ್ನು ಬಡಿದೆಬ್ಬಿಸಲು ನಂದಿನಿ ಹಾಲಿನ ಕವರ್‌, ರೈಲ್ವೆ ಟಿಕೆಟ್‌, ವಿದ್ಯುತ್ ಬಿಲ್‌, ನೀರಿನ ಬಿಲ್, ಗ್ಯಾಸ್ ಬಿಲ್‍ಗಳ ಮೇಲೂ ಇಂತಹ ವಾಕ್ಯಗಳನ್ನು ಮುದ್ರಿಸಿದಲ್ಲಿ, ವಿನೂತನ ರೀತಿಯಲ್ಲಿ ಮತದಾನದ ಅರಿವು ಮೂಡಿಸಲು ನೆರವಾಗುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !