ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಕಾರ್ಯ ಸರಳಗೊಳಿಸಿ

Last Updated 22 ಏಪ್ರಿಲ್ 2019, 20:01 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಏ. 18ರಂದು ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ನಿಧನರಾದ ಸುದ್ದಿ ಓದಿ ಬೇಸರವಾಯಿತು.ಸದ್ಯ ಚಾಲ್ತಿಯಲ್ಲಿರುವ ಮತಗಟ್ಟೆ ಕೆಲಸಗಳನ್ನು ಇನ್ನಷ್ಟು ಸರಳಗೊಳಿಸುವ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಚಿಂತಿಸಬೇಕಿದೆ.

ಮತಗಟ್ಟೆ ಸಿಬ್ಬಂದಿ ಅಣಕು ಮತದಾನ ನಡೆಸಲು ಸಾಮಾನ್ಯವಾಗಿ ಬೆಳಿಗ್ಗೆ 4ಕ್ಕೆ ಏಳಬೇಕು. 5.30ಕ್ಕೆ ಅಣಕು ಮತದಾನ, ನಂತರ ಮತದಾನ ಆರಂಭವಾಗಿ, ಸಂಜೆ 6ಕ್ಕೆ ಆ ಕಾರ್ಯ ಮುಗಿದು ಚುನಾವಣಾ ಸಾಮಗ್ರಿಗಳನ್ನು ಹಿಂದಿರುಗಿಸುವ ತನಕ ಮತಗಟ್ಟೆ ಕಾರ್ಯದಲ್ಲಿ ನಿರತರಾಗಿರಬೇಕು. ಇದು ಒಟ್ಟಾರೆಯಾಗಿ 16 ಗಂಟೆಗಳಿಗಿಂತಲೂ ಹೆಚ್ಚಿನ ಶ್ರಮ ಬೇಡುತ್ತದೆ. ಸಾವಿರಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಯ ಸಿಬ್ಬಂದಿಯಂತೂ ಹೈರಾಣಾಗಿ ಹೋಗುತ್ತಾರೆ. 55 ವರ್ಷ ದಾಟಿದ ನೌಕರರು, ಕಾಯಿಲೆಯಿಂದ ಬಳಲುತ್ತಿರುವವರು, ಋತುಸ್ರಾವದಿಂದ ಕೂಡಿದ ಮಹಿಳೆಯರು ಒತ್ತಡದಿಂದ ಬಳಲುವ ಸಾಧ್ಯತೆ ಅಧಿಕ. ಹಾಗಾಗಿ ಪ್ರತಿ ಮತಗಟ್ಟೆಗೂ ಮತದಾರರ ಸಂಖ್ಯೆಯನ್ನು 750ಕ್ಕೆ ಮಿತಿಗೊಳಿಸುವುದು ಉತ್ತಮ. ಮತದಾನದ ದಿನವನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಿರುವುದರಿಂದ, ಮತದಾನದ ಅವಧಿ ಬೆಳಿಗ್ಗೆ 7ರಿಂದ ಸಂಜೆ 5ರ ತನಕ ಇದ್ದರೆ ಸಾಕೆನಿಸುತ್ತದೆ.

ಮತದಾರರನ್ನು ಗುರುತಿಸುವ ಹಾಗೂ ಲಿಂಗವಾರು ಲೆಕ್ಕವಿಡುವ ಕೆಲಸವನ್ನು ಕಿರುತಂತ್ರಾಂಶದ ಮೂಲಕ ಮಾಡುವುದರಿಂದ ಸಿಬ್ಬಂದಿಯ ಶ್ರಮ ತಗ್ಗುತ್ತದೆ ಹಾಗೂ ನಕಲಿ ಮತದಾರರನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಹಲವೆಡೆ ಮತಯಂತ್ರಗಳ ಹಿಡಿಕೆಗಳು ಮುರಿದುಹೋಗಿ, ಸಿಬ್ಬಂದಿ ಅದನ್ನು ತಲೆ ಮೇಲೆ ಹೊತ್ತು ಸಾಗಿಸಬೇಕಾದ ಪ್ರಮೇಯ ಉಂಟಾಗಿರುವುದೂ ಇದೆ. ಇದನ್ನೆಲ್ಲ ಮನಗಂಡು ಆಯೋಗವು ನೌಕರರ ಒತ್ತಡ ತಗ್ಗಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಿ.

– ಚಾಮನಹಳ್ಳಿ, ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT