ಕೊಡುವುದರಲ್ಲಿ ಹಿಂದೆ

7

ಕೊಡುವುದರಲ್ಲಿ ಹಿಂದೆ

Published:
Updated:

‘ಖುಷಿಯಿಂದ ಕೊಡಬೇಕು, ಬೇಡಿದರೆ ಗೌರವವಿಲ್ಲ’ ಎಂಬ (ಪ್ರ.ವಾ., ಸೆ. 2) ಎಂ.ಆರ್. ಪೂವಮ್ಮ ಅವರ ಮಾತು ಸತ್ಯಸ್ಯ ಸತ್ಯ. ಕ್ರೀಡಾಪಟುಗಳಿಗೆ, ಸಾಧಕರಿಗೆ ಕೊಡುಗೆ ಕೊಡುವಲ್ಲಿ ನಮ್ಮ ರಾಜ್ಯ ಯಾವಾಗಲೂ ಹಿಂದೆಯೇ. ಹರಿಯಾಣ, ಒಡಿಶಾ, ಗುಜರಾತ್, ಪಂಜಾಬ್ ಮುಂತಾದ ಹಲವು ರಾಜ್ಯಗಳು ಇಂಥ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದರಲ್ಲಿ ಸದಾ ಮುಂದು. ಅವುಗಳು ಬೇರೆ ರಾಜ್ಯಗಳ ಕ್ರೀಡಾಪಟುಗಳಿಗೂ ನಗದು ಬಹುಮಾನ ಘೋಷಿಸಿರುವ ನಿದರ್ಶನಗಳಿವೆ. ನಮ್ಮ ಸರ್ಕಾರವೂ ಇದೇ
ರೀತಿ ಕ್ರೀಡಾ ಸಾಧಕರನ್ನು ಗೌರವಿಸುವ ಮೂಲಕ ಪ್ರೋತ್ಸಾಹ ನೀಡುವುದು ಅಗತ್ಯ. ಇಂಥ ಸಾಧಕರಿಗೆ ಉದ್ಯೋಗ ನೀಡುವುದು ಸಹ ಸರ್ಕಾರದ ಕರ್ತವ್ಯವಾಗಬೇಕು.
–ಎಸ್‌.ಕೆ. ಕುಮಾರ್, ಕಲಬುರ್ಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !