ತೊಡಕುಗಳ ಅರಿವಿದ್ದವರು ಬೋಧಿಸಲಿ

ಮಂಗಳವಾರ, ಮೇ 21, 2019
23 °C

ತೊಡಕುಗಳ ಅರಿವಿದ್ದವರು ಬೋಧಿಸಲಿ

Published:
Updated:

ರಾಜ್ಯ ಸರ್ಕಾರವು ಆರಂಭಿಸಹೊರಟಿರುವ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಬಹುತೇಕವು ಬಹುಶಃ ಗ್ರಾಮೀಣ ಪರಿಸರದಲ್ಲಿ ಬಂದಾವು. ಇಂತಹ ಶಾಲೆಗಳಲ್ಲಿ ಬೋಧಕರನ್ನು ವಿಶೇಷ ರೀತಿಯಲ್ಲಿ ಆಯ್ಕೆ ಮಾಡಬೇಕಾಗುತ್ತದೆ. ಹಳ್ಳಿಯ ಮಕ್ಕಳು, ಗ್ರಾಮೀಣ ಪರಿಸರ, ಸ್ಥಳೀಯ ಸಮಸ್ಯೆಗಳ ಪರಿಜ್ಞಾನ ಹೊಂದಿದವರನ್ನು ಈ ಶಾಲೆಗಳಿಗೆ ಶಿಕ್ಷಕರನ್ನಾಗಿ ನೇಮಿಸಬೇಕು.

ಅಭ್ಯರ್ಥಿಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಹೊಂದಿದವರಾಗಿದ್ದಲ್ಲಿ ಇಂತಹ ಶಾಲೆಗಳಲ್ಲಿ ಸಮರ್ಪಕವಾಗಿ ಕಲಿಸಿಯಾರು. ಏಕೆಂದರೆ, ತಾವು ಇಂಗ್ಲಿಷ್‌ ಭಾಷೆಯನ್ನು ಕಲಿತುಕೊಳ್ಳುವಾಗ ಎದುರಿಸಿದ ತೊಡಕುಗಳ ಅರಿವು ಅವರಿಗೆ ಇರುತ್ತದೆ. ಆರಂಭದ ಶಿಕ್ಷಣದಲ್ಲಿ ಇಂಗ್ಲಿಷ್‌ನ ಸೋಂಕೇ ಇಲ್ಲದೆ, ತರುವಾಯ ಅದನ್ನು ಅಭ್ಯಾಸ ಮಾಡಿದಂತಹ ಶಿಕ್ಷಕರಿಗೆ, ಹೇಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕು ಎಂಬುದು ತಿಳಿದಿರುತ್ತದೆ.

– ಮೈಸೂರು

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !