ಇವಿಎಂನಲ್ಲಿ ಪ್ರಾಣಪಕ್ಷಿ

ಶುಕ್ರವಾರ, ಜೂಲೈ 19, 2019
24 °C

ಇವಿಎಂನಲ್ಲಿ ಪ್ರಾಣಪಕ್ಷಿ

Published:
Updated:

ಇತ್ತೀಚೆಗೆ ಒಂದು ವಾರದ ಅವಧಿಯಲ್ಲಿ ನಮ್ಮ ದೇಶದ ಎರಡು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ದೆಹಲಿ ವಿ‌.ವಿ. ಮತ್ತು ಜೆ‌ಎನ್‌ಯು ವಿದ್ಯಾರ್ಥಿ ಯೂನಿಯನ್‌ಗಳಿಗೆ ಚುನಾವಣೆ ನಡೆಯಿತು. ದೆಹಲಿ ಮಹಾನಗರದಲ್ಲಿಯೇ ಇರುವ ಈ ಎರಡೂ ವಿಶ್ವವಿದ್ಯಾಲಯಗಳ ಚುನಾವಣೆಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ವ್ಯತ್ಯಾಸವೆಂದರೆ ದೆಹಲಿ ವಿ‌.ವಿ. ಚುನಾವಣೆ ಇವಿಎಂನಲ್ಲಿ ನಡೆಯಿತು. ಆದರೆ ಜೆ‌ಎನ್‌ಯು ಚುನಾವಣೆ ಸಾದಾ ಮತಪತ್ರಗಳ ಮೂಲಕ ನಡೆಯಿತು. ಇವಿಎಂ ಇದ್ದ ದೆಹಲಿ ವಿ‌.ವಿ.ಯಲ್ಲಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಎಬಿ‌ವಿ‌ಪಿ ಗೆದ್ದಿತು. ಆದರೆ ಮತಪತ್ರ ಬಳಸಿದ ಜೆ‌ಎನ್‌ಯುನಲ್ಲಿ ಎಡಪಕ್ಷಗಳೊಂದಿಗೆ ಸಂಯೋಜನೆ ಹೊಂದಿದ ಮೈತ್ರಿಕೂಟ ಗೆದ್ದಿತು.

ಇದರಿಂದ ಒಂದು ವಿಷಯ ಸ್ಪಷ್ಟವಾಯಿತು. ಅಜ್ಜಿ ಕಥೆಯ ರಾಕ್ಷಸನ ಪ್ರಾಣ ಒಂದು ಗಿಳಿಯಲ್ಲಿ ಅಡಗಿರುವಂತೆ ಬಿ‌ಜೆ‌ಪಿಯ ಪ್ರಾಣವೂ ಇವಿಎಂನಲ್ಲಿ ಅಡಗಿದೆ. ಬ್ಯಾಲೆಟ್ ಪೇಪರ್ ಮರಳಿ ಬಂದು ಇವಿಎಂ ಹೊರಟುಹೋದ ದಿನ ಬಿ‌ಜೆ‌ಪಿಯ ಪ್ರಾಣ ಪಕ್ಷಿಯೂ ಹಾರಿಹೋಗಬಹುದೇ? 2019ರಲ್ಲಿಯೂ ಇವಿಎಂ ಬಳಸಿಯೇ ಚುನಾವಣೆ ನಡೆಸಬೇಕು ಎಂದು ಬಿ‌ಜೆ‌ಪಿ ಹಟ ಹಿಡಿಯುತ್ತಿರುವುದು ಏಕೆ?

ಅನಿಲ್ ಕುಮಾರ್ ಪೂಜಾರಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !