ಗುರುವಾರ , ನವೆಂಬರ್ 21, 2019
24 °C

ಅರಣ್ಯ ಇಲಾಖೆ ಏನು ಮಾಡುತ್ತಿದೆ?

Published:
Updated:

ಕಾಡು ಮೊಲಗಳನ್ನು ನಿರ್ದಯವಾಗಿ ಬೇಟೆಯಾಡುವ, ನವಿಲುಗಳನ್ನು ಹಿಡಿದು ಅದರ ಪುಕ್ಕ ಕಿತ್ತು ಕ್ರೌರ್ಯ ಮೆರೆಯುವ, ಹಾವುಗಳಿಗೆ ಬೆಂಕಿ ಹಚ್ಚುವಂತಹ ಅನೇಕ ಪೈಶಾಚಿಕ ಕೃತ್ಯಗಳು ಟಿಕ್ ಟಾಕ್, ಮ್ಯೂಸಿಕಲಿ ಮುಂತಾದ ಆ್ಯಪ್‌ಗಳಲ್ಲಿ ದಿನನಿತ್ಯ ಹರಿದಾಡುತ್ತಿವೆ. ವನ್ಯಜೀವಿಗಳನ್ನು ಅತ್ಯಂತ ಕ್ರೂರವಾಗಿ ಹೀಗೆ ಬಹಿರಂಗವಾಗಿ ಬೇಟೆಯಾಡುವವರನ್ನು ಅರಣ್ಯ ಇಲಾಖೆ ಬಂಧಿಸಬಹುದಲ್ಲವೇ? ಪ್ರಾಣಿ ದಯಾ ಸಂಘಗಳು ನಿಷ್ಕ್ರಿಯಗೊಂಡಿವೆಯೇ?

ಅರಣ್ಯ ಇಲಾಖೆಯ ಈ ಮೌನ ಅತ್ಯಂತ ಅಪಾಯಕಾರಿ. ಇದು ಸಾರ್ವಜನಿಕರಲ್ಲಿ ಬಿತ್ತುವ ಸಂದೇಶವೇನು? ಇಂಥ ಪೈಶಾಚಿಕ ಕೃತ್ಯಗಳನ್ನು ತಡೆಯದಿದ್ದರೆ ಒಂದೆಡೆ ವನ್ಯಜೀವಿಗಳು ಅವಸಾನದತ್ತ ಸಾಗುತ್ತವೆ. ಇನ್ನೊಂದೆಡೆ, ಈ ಕ್ರೌರ್ಯವನ್ನೇ ಯುವಪೀಳಿಗೆಯು ಮನರಂಜನೆ, ಸಾಹಸವೆಂದು ಆಸ್ವಾದಿಸುವ ಅಪಾಯವಿರುತ್ತದೆ. ಅರಣ್ಯ ಇಲಾಖೆ ಕೂಡಲೇ ಕಾರ್ಯೋನ್ಮುಖವಾಗಬೇಕು.

– ಮಹೇಶ್ವರ ಹುರುಕಡ್ಲಿ, ಹಗರಿಬೊಮ್ಮನಹಳ್ಳಿ

ಪ್ರತಿಕ್ರಿಯಿಸಿ (+)