ಗುರುವಾರ , ಅಕ್ಟೋಬರ್ 29, 2020
21 °C

ತೆರೆದ ಪುಸ್ತಕದ ಬದುಕು ಮಾದರಿಯಾಗಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಗಾಂಧಿ ಜಯಂತಿಯಂದು ಬೆಳಗಿನಿಂದ ಸಂಜೆಯವರೆಗೆ ಗಾಂಧಿಯುಗದ ಬಾಳು, ಬದುಕು, ಸ್ವಾತಂತ್ರ್ಯ ಸಂಗ್ರಾಮ, ದಾಸ್ಯ ವಿಮುಕ್ತಿ... ಅಬ್ಬಾ, ಮಾಧ್ಯಮಗಳಿಂದ ತಿಳಿದ ಆ ಮಹನೀಯನ ಬದುಕು ತೆರೆದ ಪುಸ್ತಕದಂತೆ ಗೋಚರಿಸಿತು. ನದಿ ತೀರದಲ್ಲಿ ನಿರ್ಗತಿಕ ಮಹಿಳೆಗೆ ತನ್ನ ವಸ್ತ್ರ ದಾನ ಮಾಡಿ, ಮುಂದೆಂದೂ ಮೈತುಂಬ ಬಟ್ಟೆ ತೊಡಲಿಲ್ಲ. ಯಾವಾಗಲೂ ಮೂರನೇ ದರ್ಜೆ ರೈಲು ಪ್ರಯಾಣ, ಸಮಯ ಪ್ರಜ್ಞೆಗೆ ಬಾರದ ಸೈಕಲ್ ಸವಾರಿ ಒಂದೇ, ಎರಡೇ...

ಅಂದು ಗಾಂಧೀಜಿ ಕುರಿತು ಪ್ರಧಾನಿ ಮಾಡಿದ ನಿರರ್ಗಳ ಭಾಷಣ ಜನರನ್ನು ಮಂತ್ರಮುಗ್ಧಗೊಳಿಸಿತು. ಆದರೆ ನಡೆಯಲ್ಲಿ ಮಾತ್ರ ನಮ್ಮ ಜನಪ್ರತಿನಿಧಿಗಳು ಗಾಂಧೀಜಿ ಅವರ ಮಾರ್ಗ ಅನುಸರಿಸುವ ಮನಸ್ಸು ಮಾಡುತ್ತಿಲ್ಲ ಎಂಬುದಕ್ಕೆ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಅವರ ಬಳಕೆಗೆ ಮೀಸಲಾದ, ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಬಳಸುವಂತಹ ರೀತಿಯ ಬೋಯಿಂಗ್‌ 777 ವಿಮಾನವೇ ಸಾಕ್ಷಿ. ವಿಮಾನದ ಖರೀದಿ ಮತ್ತು ಅಗತ್ಯಕ್ಕೆ ತಕ್ಕಂತೆ ಅದರ ಮಾರ್ಪಾಟಿಗಾಗಿ ಸರ್ಕಾರಕ್ಕೆ ತಗುಲಿರುವ ವೆಚ್ಚ ಕೋಟ್ಯಂತರ ರೂಪಾಯಿ. ದೇಶದಲ್ಲಿ ನಿರುದ್ಯೋಗ ಕಾಡುತ್ತಿದೆ. ಕೆಲವೆಡೆ ಭೀಕರ ಮಳೆಯಿಂದ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಕೊರೊನಾ ಸೋಂಕಿನ ಆತಂಕದಲ್ಲಿ ಜನ ದಿನದೂಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ದುಂದುವೆಚ್ಚ ಬೇಕಿತ್ತೇ?

- ಎಂ.ಮೃತ್ಯುಂಜಯಪ್ಪ, ಚಿತ್ರದುರ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು